ಕರ್ನಾಟಕ

karnataka

ETV Bharat / state

ಹಂಪಿಗೆ ಭೇಟಿ ನೀಡಿದ ಗಾಯಕ ವಿಜಯ ಪ್ರಕಾಶ್​ - Singer Vijay Prakash visit to Hampi

ಕನ್ನಡ ಖ್ಯಾತ ಗಾಯಕ ವಿಜಯಪ್ರಕಾಶ ಹಂಪಿಯ ಭುವನೇಶ್ವರಿ ದೇವಿಗೆ ಪೂಜೆಯನ್ನು ಸಲ್ಲಿಸಿ ದರ್ಶನ ಪಡೆದರು.

ಹಂಪಿಗೆ ಭೇಟಿ ಕೊಟ್ಟ ಗಾಯಕ ವಿಜಯ ಪ್ರಕಾಶ್​
ಹಂಪಿಗೆ ಭೇಟಿ ಕೊಟ್ಟ ಗಾಯಕ ವಿಜಯ ಪ್ರಕಾಶ್​

By

Published : Jan 28, 2020, 2:37 AM IST

ಹೊಸಪೇಟೆ : ಐತಿಹಾಸಿಕ ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಕನ್ನಡ ಖ್ಯಾತ ಗಾಯಕ ವಿಜಯ್​ ಪ್ರಕಾಶ ಅವರು ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.

ಹಂಪಿಯ ಭುವನೇಶ್ವರಿ ದೇವಿಗೆ ಪೂಜೆಯನ್ನು ಸಲ್ಲಿಸಿ ದರ್ಶನ ಪಡೆದರು. ವಿಶ್ವ ಪರಂಪರೆಯ ಮಂಟಪಗಳನ್ನು ವಿಕ್ಷಿಸಿದರು ಮತ್ತು ಭವ್ಯ ಪರಂಪರೆಯನ್ನು ಮೆರೆಯುವ ಹಂಪಿಯ ದೇವಸ್ಥಾನದ ಶಿಲ್ಪ ಕಲೆಗಳನ್ನು ವಿಕ್ಷಿಸಿ ಸಂತೋಷಪಟ್ಟರು. ಸಾಸಿವೆಕಾಳು, ಕಡಲೆಕಾಳು, ಕೃಷ್ಣದೇವಸ್ಥಾನ, ಉಗ್ರನರಸಿಂಹ, ರಾಣಿಸ್ನಾನಗೃಹ ಸೇರಿದಂತೆ ನಾನಾ ಸ್ಮಾರಕಗಳನ್ನು ಅಚ್ಚುತರಾಯ ದೇವಸ್ಥಾನ ವಿಜಯ ವಿಠಲ ದೇವಸ್ಥಾನ ಕಲ್ಲಿನ ರಥವನ್ನು ವಿಕ್ಷಸಿದರು.

ವಿಜಯ ಪ್ರಕಾಶ್​
ಉತ್ತರ ಕರ್ನಾಟಕದಲ್ಲಿ‌ ನೆಚ್ಚಿನ ಕಮಲಾಪುರದಲ್ಲಿನ ನಿಸರ್ಗಧಾಮಕ್ಕೆ ಭೇಟಿ ನೀಡಿ ಛಾಯಾಚಿತ್ರಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಕರಡಿ ಧಾಮದಲ್ಲಿರು ಅಪರೂಪದ ಚಿತ್ರಗಳ ಸಂಗ್ರಹ ಇಲ್ಲಿದೇ. ಅವುಗಳನ್ನು ಸಂರಕ್ಷಿಸುವ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ABOUT THE AUTHOR

...view details