ಬಳ್ಳಾರಿ: ಕಂಪ್ಲಿ ತಾಲೂಕಿನ ಇಟಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯನ ವರ್ತನೆ ಖಂಡಿಸಿ ಎಸ್ಡಿಎಂಸಿ ಅಧ್ಯಕ್ಷರು, ಉಪಾಧ್ಯಕ್ಷರು, ಊರಿನ ಯುವಕರು ಹಾಗೂ ಮುಖಂಡರು ಸೇರಿ ಮೌನ ಪ್ರತಿಭಟನೆ ನಡೆಸಿದ್ರು.
ಮುಖ್ಯೋಪಾಧ್ಯಾಯನ ವರ್ತನೆ ಖಂಡಿಸಿ ಗ್ರಾಮಸ್ಥರಿಂದ ಮೌನ ಪ್ರತಿಭಟನೆ - ಮುಖ್ಯ ಗುರುಗಳ ವರ್ತನೆ ಖಂಡಿಸಿ ಮೌನ ಪ್ರತಿಭಟನೆ
ಮುಖ್ಯ ಗುರುಗಳ ವರ್ತನೆ ಖಂಡಿಸಿ ಎಸ್ಡಿಎಂಸಿ ಅಧ್ಯಕ್ಷರು, ಉಪಾಧ್ಯಕ್ಷರು, ಊರಿನ ಯುವಕರು ಹಾಗೂ ಮುಖಂಡರು ಸೇರಿ ಮೌನ ಪ್ರತಿಭಟನೆ ನಡೆಸಿದರು.
ಮುಖ್ಯ ಗುರುಗಳ ವರ್ತನೆ ಖಂಡಿಸಿ ಮೌನ ಪ್ರತಿಭಟನೆ
ಈ ಮುಖ್ಯೋಪಾಧ್ಯಾಯ ಸರಿಯಾಗಿ ಶಾಲೆಗೆ ಬರುತ್ತಿಲ್ಲ ಎಂದು ಜನ ಪ್ರತಿಭಟನೆ ಮಾಡಿದ್ರು. ಮುಖ್ಯ ಗುರು ವಿ. ಫಕ್ಕಿರಪ್ಪ ವಿದ್ಯಾರ್ಥಿಗಳಿಗೆ ಸರಿಯಾಗಿ ಬಿಸಿಯೂಟ ನೀಡುವುದಿಲ್ಲ, ತಿಂಗಳಲ್ಲಿ 10 ರಿಂದ 12 ದಿನಗಳು ಮಕ್ಕಳಿಗೆ ಹಾಲು ವಿತರಿಸಿಲ್ಲ, ಸರ್ಕಾರದ ಕಡೆಯಿಂದ ಬರುವ ಸೈಕಲ್ಗಳಿಗೆ ಹಣವನ್ನು ಪಡೆಯುತ್ತಾರೆ ಎಂದು ಆರೋಪಿಸಿದ್ರು. ಈ ಕೂಡಲೇ ಮುಖ್ಯೋಪಾಧ್ಯಾಯ ವಿ.ಫಕ್ಕೀರಪ್ಪ ಅವರನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದ್ರು.
ಮತ್ತೋರ್ವ ಸಹಾಯಕ ಶಿಕ್ಷಕ ಎಸ್. ಪ್ರಭು ಮದ್ಯಪಾನ ಮತ್ತು ಗುಟ್ಕಾ ಬಾಯಲ್ಲಿಟ್ಟುಕೊಂಡೇ ಶಾಲೆಗೆ ಬರುತ್ತಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಿದರು.