ಕರ್ನಾಟಕ

karnataka

ETV Bharat / state

ಕೆ.ಸಿ ಕೊಂಡಯ್ಯ ಮನೆಗೆ ಪ್ರತಿಭಟನಾಕಾರರ ಮುತ್ತಿಗೆ : ತಡೆದ ಮಹಿಳಾ ಸಿಪಿಐ - ಕನ್ನಡಪರ ಸಂಘಟನೆಗಳ ಕಾರ್ಯಕರ್ತರು

ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆಗೆ ಸಹಮತ ಸೂಚಿಸಿರುವ ಎಂಎಲ್​ಸಿ ಕೆ.ಸಿ ಕೊಂಡಯ್ಯರ  ಬಳ್ಳಾರಿಯ ಮನೆಯನ್ನು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದಾಗ ಅವರನ್ನು ಮಹಿಳಾ ಪೊಲೀಸ್​ ಠಾಣೆಯ ಸಿಪಿಐ ಗಾಯತ್ರಿ ತಡೆದ ಪ್ರಸಂಗ ನಡೆಯಿತು.

By

Published : Oct 1, 2019, 1:50 PM IST

ಬಳ್ಳಾರಿ:ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆಗೆ ಸಹಮತ ಸೂಚಿಸಿರುವ ಎಂಎಲ್​ಸಿ ಕೆ.ಸಿ ಕೊಂಡಯ್ಯರ ಬಳ್ಳಾರಿಯ ಮನೆಯನ್ನು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದಾಗ ಅವರನ್ನು ಮಹಿಳಾ ಪೊಲೀಸ್​ ಠಾಣೆಯ ಸಿಪಿಐ ಗಾಯತ್ರಿ ತಡೆದ ಪ್ರಸಂಗ ನಡೆಯಿತು.

ಎಂಎಲ್​ಸಿ ಕೆ.ಸಿ ಕೊಂಡಯ್ಯರ ಬಳ್ಳಾರಿಯ ಮನೆ ಬಳಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನ

ಜಿಲ್ಲಾ ಪೊಲೀಸ್ ಇಲಾಖೆ ಪೂರ್ವಾನುಮತಿ ಇಲ್ಲದೇ, ಜಿಲ್ಲೆಯ ಕಪ್ಪಗಲ್ಲು ರಸ್ತೆಯ ನಾಗೇಶ ಶಾಸ್ತ್ರೀ ನಗರದಲ್ಲಿರುವ ಕೊಂಡಯ್ಯರ ಮನೆಗೆ ಮುತ್ತಿಗೆ ಹಾಕಲು ಯತ್ನಿಸುವ ವಿಷಯ ತಿಳಿದ ಸಿಪಿಐ ಗಾಯತ್ರಿ ಹಾಗೂ ಸಿಬ್ಬಂದಿ ಕೂಡಲೇ ಘಟನಾ ಸ್ಥಳಕ್ಕಾಗಮಿಸಿದರು. ಕೊಂಡಯ್ಯನವರ ಮನೆಯ ಪ್ರವೇಶದ ಗೇಟ್ ಬಳಿ ಕೇವಲ ಐದಾರು ಮಂದಿ ಸಾಲಾಗಿ ಕುಳಿತು ಘೋಷಣೆ ಕೂಗಲಾರಂಭಿಸಿದರು.‌ ನಂತರ ಪೊಲೀಸ್ ಸಿಬ್ಬಂದಿ ಬಂದು ಕಾರ್ಯಕರ್ತರನ್ನು ಮೇಲೆಬ್ಬಿಸಲು ಮುಂದಾದಾಗ ಕನ್ನಡ ಪರ ಸಂಘಟನೆಯ ಮುಖಂಡ ಕುರುಗೋಡು ಚನ್ನಬಸವರಾಜ, ಸಿಪಿಐ ಗಾಯತ್ರಿಯೊಂದಿಗೆ ವಾಗ್ವಾದ ನಡೆಸಿದರು.

ಇನ್ನು ಸಿಪಿಐ ಗಾಯತ್ರಿ ಕಾರ್ಯಕರ್ತರಿಗೆ ನೀವು ಪ್ರತಿಭಟನೆ ನಡೆಸೋದು ಇಲ್ಲಿ ಅಲ್ಲ, ಗಡಿಗಿ ಚನ್ನಪ್ಪ ವೃತ್ತದ ಬಳಿ ನಿಮ್ಮ ಪ್ರತಿಭಟನೆಗೆ ಅವಕಾಶವಿದೆ. ಅಲ್ಲಿಗೆ ಹೋಗಿ ಮಾಡಿ ಎಂದು ಸಿಪಿಐ ಗಾಯತ್ರಿ ತಾಕೀತು ಮಾಡಿದ್ದಾರೆ.

ABOUT THE AUTHOR

...view details