ಕರ್ನಾಟಕ

karnataka

ETV Bharat / state

ಗಣಿನಾಡಿಂದ ಪಶ್ಚಿಮ ಬಂಗಾಳಕ್ಕೆ ಪ್ರಯಾಣ ಬೆಳೆಸಿದ 1,318 ವಲಸಿಗರು - Shramik train Leaves for West Bengal from Bellary by carrying 1318 Migrants

ಉತ್ತರ ಕರ್ನಾಟಕ ಭಾಗದ ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರುನಿಂದ ಒಟ್ಟು 1,318 ವಲಸಿಗರು ಇಂದು ಮಧ್ಯಾಹ್ನ ಬಳ್ಳಾರಿಯಿಂದ ಶ್ರಮಿಕ್​ ರೈಲಿನ ಮೂಲಕ ಪಶ್ಚಿಮ ಬಂಗಾಳಕ್ಕೆ ತೆರಳಿದರು.

Shramik train
ಬಳ್ಳಾರಿಯಿಂದ ಪಶ್ಚಿಮ ಬಂಗಾಳಕ್ಕೆ ಹೊರಟ ಶ್ರಮಿಕ್​​ ರೈಲು

By

Published : May 30, 2020, 4:34 PM IST

ಬಳ್ಳಾರಿ: ನಗರದ ರೈಲ್ವೆ ನಿಲ್ದಾಣದಿಂದ ಇಂದು ಪಶ್ವಿಮ ಬಂಗಾಳಕ್ಕೆ 1318 ವಲಸೆ ಕಾರ್ಮಿಕರು ಶ್ರಮಿಕ ರೈಲಿನ ಮೂಲಕ ತಮ್ಮ ತವರಿಗೆ ಪ್ರಯಾಣ ಬೆಳೆಸಿದರು.

ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರುನಿಂದ ಒಟ್ಟು 1318 ಕಾರ್ಮಿಕರು ಬಳ್ಳಾರಿ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದು, ಇಂದು ಮಧ್ಯಾಹ್ನ ಬಳ್ಳಾರಿಯಿಂದ ಹೊರಟ ವಿಶೇಷ ಶ್ರಮಿಕ್​ ರೈಲಿನ ಮೂಲಕ ತವರು ಸೇರಲು ಸಂತಸದಿಂದ ತೆರಳಿದರು.

ಇದೇ ವೇಳೆ, ಶ್ರಮಿಕ ರೈಲಿನಲ್ಲಿ ಪ್ರಯಾಣ ಬೆಳಸಿದ ವಲಸೆ ಕಾರ್ಮಿಕರಿಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸದಸ್ಯರು ಆಹಾರ, ನೀರು, ಮಾಸ್ಕ್ ಗಳನ್ನು ಉಚಿತವಾಗಿ ವಿತರಣೆ ಮಾಡಿದರು.

ಬಳ್ಳಾರಿ ಜಿಲ್ಲಾ ವರಿಷ್ಠಾಧಿಕಾರಿ ಸಿ.ಕೆ. ಬಾಬಾ ಅವರು ವಲಸೆ ಕಾರ್ಮಿಕರನ್ನು ಬೀಳ್ಕೊಟ್ಟಿದ್ದು, ನಿಮ್ಮ ಊರುಗಳಿಗೆ ಹೋಗಿ ಮತ್ತೆ ಬಳ್ಳಾರಿಗೆ ವಾಪಸ್​​​​ ಬನ್ನಿ ಎಂದು ಶುಭ ಕೋರಿದರು.

ಬಳ್ಳಾರಿಯಿಂದ ಪಶ್ಚಿಮ ಬಂಗಾಳಕ್ಕೆ ಹೊರಟ ಶ್ರಮಿಕ್​​ ರೈಲು

ರೈಲ್ವೆ ‌ನಿಲ್ದಾಣದಲ್ಲಿ, ರೈಲ್ವೆ ಬೋಗಿಗಳಲ್ಲಿ ಸಾಮಾಜಿಕ ಅಂತರ ಇರಲಿಲ್ಲ:

ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸಲು ಆಗಮಿಸಿದ ವಿವಿಧ ಇಲಾಖೆಯ ಅಧಿಕಾರಗಳು ಮತ್ತು ಸಿಬ್ಬಂದಿ ಯಾವುದೇ ಅಂತರ ಕಾಯ್ದುಕೊಳ್ಳದೇ ಇರುವುದು ವಿಪರ್ಯಾಸವಾಗಿತ್ತು. ಇತರರಿಗೆ ಮಾದರಿಯಾಗಬೇಕಿರುವ ಅಧಿಕಾರಿಗಳೇ ಹೀಗೆ ಮಾಡಿದರೆ, ಸಾರ್ವಜನಿಕರ ಸ್ಥಿತಿ ಏನು ಎಂಬುದು ಕೆಲವರಲ್ಲಿ ಮೂಡಿದ ಪ್ರಶ್ನೆಯಾಗಿತ್ತು.

ಈ ವೇಳೆ, ಸ್ಥಳದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸಿ.ಕೆ ಬಾಬಾ, ಅಪರ ಜಿಲ್ಲಾಧಿಕಾರಿ ಮಂಜುನಾಥ, ಹೆಚ್ಚುವರಿ ಜಿಲ್ಲಾ ವರಿಷ್ಠಾಧಿಕಾರಿ ಲಾವಣ್ಯ, ಈಶ್ವರ ಕಾಂಡೂ, ತಹಶೀಲ್ದಾರ್​​ ನಾಗರಾಜ್ , ಡಿವೈಎಸ್ಪಿ ರಾಮರಾವ್, ಮಹೇಶ್ವರ ಗೌಡ, ಸಿಪಿಐ ನಾಗರಾಜ್ ಇನ್ನಿತರರು ಹಾಜರಿದ್ದರು.

ABOUT THE AUTHOR

...view details