ಹೊಸಪೇಟೆ: ನಗರದಲ್ಲಿರುವ ಯುವಕರಿಗೆ ಹಾಗೂ ತಾಲೂಕಿನ ಕ್ರೀಡಾ ಪಟುಗಳಿಗಾಗಿ ಮೈದಾನವನ್ನು ನಿರ್ಮಿಸಲಾಗಿದೆ. ಆದ್ರೆ, ಈ ಮೈದಾನದಲ್ಲೀಗ ಒಳಚರಂಡಿ ನೀರು ತುಂಬಿದ್ದು, ಆಟವಾಡಲು ಬರದಂತಾಗಿದೆ.
ಹೊಸಪೇಟೆ ಕ್ರೀಡಾಂಗಣಕ್ಕೆ ನುಗ್ಗಿದ ಒಳಚರಂಡಿ ನೀರು: ಕ್ರಮಕ್ಕೆ ಮುಂದಾಗ್ತಿಲ್ಲವಂತೆ ಅಧಿಕಾರಿಗಳು
ಹೊಸಪೇಟೆಯಲ್ಲಿರುವ ಯುವಕರಿಗೆ ಹಾಗೂ ತಾಲೂಕಿನ ಕ್ರೀಡಾ ಪಟುಗಳಿಗಾಗಿ ಮೈದಾನವನ್ನು ನಿರ್ಮಿಸಲಾಗಿದೆ. ಆದ್ರೆ, ಈ ಮೈದಾನದಲ್ಲೀಗ ಒಳಚರಂಡಿ ನೀರು ತುಂಬಿದ್ದು, ಆಟವಾಡದಂತಹ ಸ್ಥಿತಿ ಇದೆ.
ಈ ಕುರಿತು ಯಾವುದೇ ನಗರಸಭೆ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳು ನಮಗೂ ಅದಕ್ಕೂ ಸಂಬಂಧವೇ ಇಲ್ಲ ಎಂದು ಸುಮ್ಮನೆ ಕುಳಿತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಕುರಿತು ನಗರಸಭೆ ಅಧಿಕಾರಿಗಳನ್ನು ಕೇಳಿದ್ರೆ ಕ್ರೀಡಾ ಇಲಾಖೆಯ ಅಧಿಕಾರಿಗಳು ನಮ್ಮ ಮೈದಾನದಲ್ಲಿ ಯಾವುದೇ ರೀತಿಯ ನೀರು ಬಂದಿಲ್ಲ ಚೆನ್ನಾಗಿದೆ ಎನ್ನುತ್ತಾರೆ. ಆದರೆ, ಕ್ರೀಡಾ ಇಲಾಖೆ ಅಧಿಕಾರಿಗಳು ನಾವು ಸಾಕಷ್ಟು ಸಲ ನಗರಸಭೆಯ ಆಯುಕ್ತರ ಗಮನಕ್ಕೆ ತಂದರು ಏನು ಪ್ರಯೋಜನೆಯಾಗಿಲ್ಲ ಎಂದು ಒಬ್ಬರ ಮೇಲೊಬ್ಬರು ಸಬೂಬು ಹೇಳುತ್ತಿದ್ದಾರೆಯೇ ಹೊರತು, ಯಾವುದೇ ಪರಿಹಾರ ಕಾರ್ಯಕ್ಕೆ ಮುಂದಾಗಿಲ್ಲ ಎನ್ನುವುದು ಕ್ರೀಡಾಸಕ್ತರ ದೂರು.