ಬಳ್ಳಾರಿ: ಇಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ)ದ ಆವರಣದಲ್ಲಿ ಕಳೆದ ಆರು ತಿಂಗಳಿಂದ ಕಟ್ಟಡದ ಪಕ್ಕದಲ್ಲಿ ಚರಂಡಿ ನೀರು ನಿಂತು ಗಬ್ಬು ನಾರುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಗಬ್ಬು ನಾರುತ್ತಿದೆ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಹಿಂಭಾಗ
ಬಳ್ಳಾರಿಯ 5 ಇಂದಿರಾ ಕ್ಯಾಂಟೀನ್ಗಳಿಗೆ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ)ದ ಹಿಂಭಾಗದ ಕಟ್ಟಡದಲ್ಲಿ ತಿಂಡಿ ಹಾಗೂ ಊಟವನ್ನು ತಯಾರು ಮಾಡುತ್ತಾರೆ. ಆದರೆ ಕಳೆದ ಆರು ತಿಂಗಳಿಂದ ಕಟ್ಟಡದ ಪಕ್ಕದಲ್ಲಿಯೇ ಚರಂಡಿ ನೀರು ನಿಂತು ಗಬ್ಬು ನಾರುತ್ತಿದೆ.
ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ
ನಗರದ 5 ಇಂದಿರಾ ಕ್ಯಾಂಟೀನ್ಗಳಿಗೆ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಹಿಂಭಾಗದ ಕಟ್ಟಡದಲ್ಲಿ ತಿಂಡಿ ಹಾಗೂ ಊಟವನ್ನು ತಯಾರಿಸುತ್ತಾರೆ. ಆದರೆ ಕಳೆದ ಆರು ತಿಂಗಳಿಂದ ಕಟ್ಟಡದ ಪಕ್ಕದಲ್ಲಿಯೇ ಚರಂಡಿ ನೀರು ನಿಂತು ಗಬ್ಬು ನಾರುತ್ತಿದೆ.
ಈ ಬಗ್ಗೆ ಇಂದಿರಾ ಕ್ಯಾಂಟೀನ್ ನಿರ್ವಾಹಕರಿಗೆ ಕೇಳಿದರೆ, ಬುಡಾ ಆವರಣದಲ್ಲಿ ಒಳಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಕಳೆದ ಆರು ತಿಂಗಳಿಂದ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರೂ, ಅವರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ತಿಳಿಸಿದ್ದಾರೆ.