ವಿಜಯನಗರ:ಹಡಗಲಿ ತಾಲೂಕಿನ ಕಾಲ್ವಿತಾಂಡಾದ ಸರಕಾರಿ ಶಾಲೆಗೆ ಚರಂಡಿ ನೀರು ನುಗ್ಗಿ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ. ತಾಲೂಕು ಕೇಂದ್ರದಿಂದ ಕಾಲ್ವಿತಾಂಡಾ ಕೇವಲ ಹತ್ತು ಹದಿನೈದು ಕಿ.ಮೀ. ದೂರದಲ್ಲಿದೆ. ಈ ಶಾಲೆಯಲ್ಲಿ 1 ರಿಂದ 8ನೇ ತರಗತಿವರೆಗೆ ಮುನ್ನೂರಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಆದರೆ, ಈ ಶಾಲೆಗೆ ಸರಿಯಾದ ಮೂಲಸೌಕರ್ಯ ಇಲ್ಲದಂತಾಗಿದೆ. ಅದಲ್ಲದೇ ಊರಿನ ಕೊಳಚೆ ನೀರು ಹರಿಯುವ ಕಾಲುವೆ ಶಾಲೆಯ ಕಾಂಪೌಂಡ್ ಪಕ್ಕವೇ ಹರಿಯುತ್ತಿದ್ದು, ಅದು ಶಾಲಾ ಆವರಣಕ್ಕೆ ಬರುತ್ತಿದೆ. ಶಾಲಾ ಆವರಣದ ತುಂಬಾ ಕೊಳಚೆ ನೀರು ತುಂಬಿಕೊಂಡಿದೆ. ಇದರಿಂದ ಮಕ್ಕಳಲ್ಲಿ ಅನಾರೋಗ್ಯ ಕಾಡುವ ಭಯವೂ ಇದೆ.