ಕರ್ನಾಟಕ

karnataka

ETV Bharat / state

ಹೊಸಪೇಟೆ ಬಳಿ ಟಿಪ್ಪರ್​, ಲಾರಿ, ಕ್ರೂಸರ್​​ ನಡುವೆ ಸರಣಿ ಅಪಘಾತ.. ಮಹಿಳೆಯರು ಸೇರಿ 7 ಜನರು ಸಾವು - Serial accident in hosapete

ಹೊಸಪೇಟೆ ತಾಲೂಕಿನಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿದ್ದು, 7 ಮಂದಿ ಸಾವನ್ನಪ್ಪಿದ್ದಾರೆ.

serial-accident-in-national-highway-near-hosapete
ಹೊಸಪೇಟೆ: ಟಿಪ್ಪರ್​, ಲಾರಿ, ಕ್ರೂಸರ್​​ ನಡುವೆ ಸರಣಿ ಅಪಘಾತ.. ಮಕ್ಕಳು ಸೇರಿ 7 ಜನರು ಸಾವು

By ETV Bharat Karnataka Team

Published : Oct 9, 2023, 5:47 PM IST

Updated : Oct 9, 2023, 6:44 PM IST

ವಿಜಯನಗರ : ಟಿಪ್ಪರ್​, ಲಾರಿ ಮತ್ತು ಕ್ರೂಸರ್ ನಡುವೆ ಭೀಕರ ಸರಣಿ ಅಪಘಾತದಲ್ಲಿ ಓರ್ವ ಬಾಲಕ, ಮಹಿಳೆಯರು ಸೇರಿದಂತೆ 7 ಜನರು ಮೃತಪಟ್ಟಿದ್ದಾರೆ. ಜಿಲ್ಲೆಯ ಹೊಸಪೇಟೆ ತಾಲೂಕಿನ ವ್ಯಾಸನಕೇರಿ ಬಳಿ ರಾಷ್ತ್ರೀಯ ಹೆದ್ದಾರಿ 50ರಲ್ಲಿ ಸೋಮವಾರ ಮಧ್ಯಾಹ್ನ ಅವಘಡ ಸಂಭವಿಸಿದೆ.

ಅಪಘಾತದಲ್ಲಿ ಕ್ರೂಸರ್‌ ವಾಹನವು ಸಂಪೂರ್ಣ ನಜ್ಜುಗುಜ್ಜಾಗಿದೆ. ಟಿಪ್ಪರ್​ ಮುಂಭಾಗ ಜಖಂಗೊಂಡಿದ್ದು, ಕಳಚಿ ಬಿದ್ದಿದೆ. ಮತ್ತೊಂದು ಲಾರಿ ನಿಯಂತ್ರಣ ಕಳೆದುಕೊಂಡು ರಸ್ತೆ ಪಕ್ಕಕ್ಕೆ ಉರುಳಿ ಬಿದ್ದಿದೆ. ಮೃತರನ್ನು ಹೊಸಪೇಟೆಯ ಉಕ್ಕಡ ಕೇರಿಯ ಉಮಾ (45), ಕೆಂಚವ್ವ (80), ಭಾಗ್ಯ (32), ಅನಿಲ (30), ಗೋಣಿ ಬಸಪ್ಪ (65), ಭೀಮಲಿಂಗಪ್ಪ (50), ಬಾಲಕ ಯುವರಾಜ (4) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಇನ್ನೂ ಕೆಲವರಿಗೆ ಗಂಭೀರ ಗಾಯಗಳಾಗಿದ್ದು, ಮೃತರ ಸಂಖ್ಯೆ ಏರಿಕೆ ಆಗುವ ಸಾಧ್ಯತೆ ಇದೆ.

ಮೃತರ ಕುಟುಂಬಸ್ಥರ ಆಕ್ರಂದನ: ಕ್ರೂಸರ್​ ವಾಹನದಲ್ಲಿ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕೂಲಹಳ್ಳಿ ಗೋಣಿಬಸವೇಶ್ವರ ದೇವಸ್ಥಾನಕ್ಕೆ ತೆರಳಿದ್ದ ಕುಟುಂಬಸ್ಥರು, ಮರಳಿ ಬರುವಾಗ ದುರ್ಘಟನೆ ನಡೆದಿದೆ‌. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಪಘಾತದ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಜಖಂಗೊಂಡ ವಾಹನಗಳಲ್ಲಿ ಸಿಲುಕಿರುವ ಮೃತದೇಹಗಳನ್ನು ಹೊರತೆಗೆದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

ಭೀಕರ ಸರಣಿ ಅಪಘಾತ

ಕ್ರೂಸರ್‌ ವಾಹನದಲ್ಲಿ ಒಟ್ಟು 13 ಜನರಿದ್ದರು ಎಂಬ ಮಾಹಿತಿ ಇದ್ದು, ಕೆಲ ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಹೊಸಪೇಟೆ ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳದಲ್ಲಿ ವಿಜಯನಗರ ಎಸ್‌ಪಿ ಶ್ರೀಹರಿಬಾಬು ಮೃತದೇಹಗಳನ್ನು ಹೊರತೆಗೆಯಲು ಸಿಬ್ಬಂದಿಗೆ ಸಹಕಾರ ನೀಡಿದ್ದಾರೆ. ಸ್ಥಳೀಯರು ಕೂಡ ಪೊಲೀಸರ ಕಾರ್ಯಾಚರಣೆಗೆ ನೆರವಾದರು.

ಕೆಲ ದೂರ ಕ್ರಮಿಸಿದ್ದರೆ ಮನೆ ತಲುಪುತ್ತಿದ್ದರು:ಅಪಘಾತವಾದ ಕ್ರೂಸರ್‌ ಹೊಸಪೇಟೆಯದ್ದೇ ಆಗಿದ್ದು, ಮೃತಪಟ್ಟವರೆಲ್ಲ ಹೊಸಪೇಟೆ ನಗರದವರು ಎಂದು ತಿಳಿದು ಬಂದಿದೆ. ಕೆಲ ಕಿ.ಮೀ ದೂರ ತೆರಳಿದ್ದರೆ ಎಲ್ಲರೂ ಅವರವರ ಮನೆಗೆ ಮರಳುತ್ತಿದ್ದರು. ಆದರೆ, ವಿಧಿ ಬರಹ ಬೇರೆಯದ್ದೇ ಆಗಿತ್ತು. ಮನೆಯಿಂದ ಕೆಲವೇ ದೂರದಲ್ಲಿ ಅಪಘಾತ ಸಂಭವಿಸಿ ಸಾವು ಕಂಡಿದ್ದಾರೆ.

ಸದ್ಯ ಅಪಘಾತಕ್ಕೆ ಕಾರಣ ಏನೆಂಬುದು ಇನ್ನೂ ಕೂಡ ತಿಳಿದು ಬಂದಿಲ್ಲ. ದುರ್ಘಟನೆಯಿಂದ ರಾಷ್ತ್ರೀಯ ಹೆದ್ದಾರಿ 50ರಲ್ಲಿ ಭಾರಿ ಟ್ರಾಫಿಕ್‌ ಜಾಮ್‌ ಉಂಟಾಗಿದೆ. ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.

ಇದನ್ನೂ ಓದಿ:ಮತ್ತೊಂದು ದುರಂತ... ತಮಿಳುನಾಡಿನ ಪಟಾಕಿ ಅಂಗಡಿಯಲ್ಲಿ ಅಗ್ನಿ ಅವಘಡ: 7 ಮಂದಿ ದಾರುಣ ಸಾವು

Last Updated : Oct 9, 2023, 6:44 PM IST

ABOUT THE AUTHOR

...view details