ಕರ್ನಾಟಕ

karnataka

ETV Bharat / state

ಬಳ್ಳಾರಿಯಲ್ಲಿ ಕೊರೊನಾ ವಾರಿಯರ್ಸ್​ಗೆ ಹಿರಿಯ ನಾಗರಿಕರಿಂದ ಸನ್ಮಾನ

ಕೊರೊನಾ ಕುರಿತು ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ವಾರ್ತಾ ಇಲಾಖೆ ಹಾಗೂ ಮಾಧ್ಯಮಗಳು ವಹಿಸುತ್ತಿರುವ ಪಾತ್ರ ಪ್ರಮುಖವಾಗಿದೆ ಎಂದು ನಿವೃತ್ತ ಮುಖ್ಯ ಶಿಕ್ಷಕ ಚಾ.ಮ.ಗಂಗಾಧರಯ್ಯ ಹೇಳಿದರು.

senior citizens  regards to Corona Warriors
ಕೊರೊನಾ ವಾರಿಯರ್ಸ್​ಗಳಿಗೆ ಹಿರಿಯ ನಾಗರಿಕರಿಂದ ಸನ್ಮಾನ

By

Published : May 5, 2020, 6:46 PM IST

ಬಳ್ಳಾರಿ:ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಕೊರೊನಾ ವಾರಿಯರ್ಸ್​ ಆಗಿ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಪೊಲೀಸ್​ ಇಲಾಖೆ, ಪೌರಾಡಳಿತ ಸಿಬ್ಬಂದಿ, ಮಾಧ್ಯಮಗಳು ಸಲ್ಲಿಸುತ್ತಿರುವ ಸೇವೆ ಅಮೂಲ್ಯವಾದದ್ದು ಎಂದು ಹಿರಿಯ ನಾಗರಿಕರು ಮತ್ತು ನಿವೃತ್ತ ಮುಖ್ಯ ಶಿಕ್ಷಕ ಚಾ.ಮ.ಗಂಗಾಧರಯ್ಯ ಹೇಳಿದರು.

ಕೊರೊನಾ ವಾರಿಯರ್ಸ್​ಗೆ ಹಿರಿಯ ನಾಗರಿಕರಿಂದ ಸನ್ಮಾನ
ಕೊರೊನಾ ವಾರಿಯರ್ಸ್​ಗೆ ಹಿರಿಯ ನಾಗರಿಕರಿಂದ ಸನ್ಮಾನ
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್-19 ವಿರುದ್ಧ ಹೋರಾಟದಲ್ಲಿ ಕೊರೊನಾ ವಾರಿಯರ್ಸ್‌ ಆಗಿ ಸೇವೆ ಸಲ್ಲಿಸುತ್ತಿರುವ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮತ್ತು ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಕೆ.ರಾಮಲಿಂಗಪ್ಪ ಸೇರಿದಂತೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ, ಮಹಾನಗರ ಪಾಲಿಕೆ ಆಯುಕ್ತೆ, ಜಿಲ್ಲಾ ವೈದ್ಯಾಧಿಕಾರಿಗಳನ್ನು ಸನ್ಮಾನಿಸಲಾಯಿತು. ನಂತರ ಮಾತನಾಡಿದ ಅವರು, ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಅತ್ಯಾವಶ್ಯಕ ಇಲಾಖೆಗಳು ಮತ್ತು ಮಾಧ್ಯಮಗಳು ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯ. ಅವರೆಲ್ಲರೂ ಒಗ್ಗಟ್ಟಿನಿಂದ ಹಗಲಿರುಳು ಎನ್ನದೆ ಜನರ ಸೇವೆ ಮಾಡುತ್ತಿದ್ದು, ಭಗವಂತ ಇನ್ನೂ ಹೆಚ್ಚಿನ ಸೇವೆ ಸಲ್ಲಿಸುವ ಶಕ್ತಿ ನೀಡಲಿ ಮತ್ತು ಕೊರೊನಾ ದೇಶದಿಂದ ತೊಲಗಲಿ ಎಂದು ಆಶಿಸಿದರು.

ABOUT THE AUTHOR

...view details