ಕರ್ನಾಟಕ

karnataka

ETV Bharat / state

ಗಾಂಜಾ, ಎಸ್.ಎಲ್.ಡಿ ಮಾರಾಟ: ಪ್ರತ್ಯೇಕ ಪ್ರಕರಣದಲ್ಲಿ ಐವರ ಬಂಧನ - Selling drugs Five arrested in separate case

ಗಾಂಜಾ ಹಾಗೂ ಎಸ್.ಎಲ್.ಡಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಎರಡು ಪ್ರತ್ಯೇಕ ಪ್ರಕರಣದಲ್ಲಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.

Selling drugs Five arrested in separate case in bellrey
ಪ್ರತ್ಯೇಕ ಪ್ರಕರಣದಲ್ಲಿ ಐವರ ಬಂಧನ

By

Published : Jun 4, 2021, 8:05 AM IST

ಹೊಸಪೇಟೆ (ವಿಜಯನಗರ): ನಗರದ ವಿಜಯನಗರ ಕಾಲೇಜಿನ ಚೆಕ್‌ಪೋಸ್ಟ್‌ನಲ್ಲಿ ಎಸ್.ಎಲ್.ಡಿ ಮಾದಕ ವಸ್ತು ಮಾರಾಟ ಮಾಡಲು ಯತ್ನಿಸಿದ್ದ ಇಬ್ಬರನ್ನು ಚಿತ್ತವಾಡ್ಗಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಬೆಂಗಳೂರಿನ ರಘುನಾಥ ಕುಮಾರ, ಹಿರಿಯೂರನ ಸೋಲಮನ್ ಬಂಧಿತರು. ಇವರಿಂದ 5,70,000 ರೂ. ಮೌಲ್ಯದ 570 ಎಸ್.ಎಲ್.ಡಿ ಸ್ಟ್ಯಾಂಪ್, 35,000 ರೂ.ನಗದು, ಹುಂಡೈ ಕಾರು, ಎರಡು ಮೊಬೈಲ್ ಸೇರಿದಂತೆ ಒಟ್ಟು 16,20,000 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ಆಂಧ್ರಪ್ರದೇಶದಿಂದ ಶಿವಮೊಗ್ಗಕ್ಕೆ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಮೂವರನ್ನು ಬಳ್ಳಾರಿ ತಾಲೂಕಿನ ಪಿ.ಡಿ ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಅನ್ವರ್ ಕಾಲೋನಿಯ ಅಡಿಕೆ ವ್ಯಾಪಾರಿ ಆಶ್ಫಕ್ ಖಾನ್ (24), ಹಣ್ಣಿನ ವ್ಯಾಪಾರಿ ತೌಷಿಬ್ ಖಾನ್ (21) ಮತ್ತು ಎರಡನೇ ವರ್ಷದ ಬಿ.ಕಾಂ ವಿದ್ಯಾರ್ಥಿ ಸಯ್ಯದ್ ಅಕ್ಸರ್ ಎಂಬುವವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ 28 ಕೆ.ಜಿ ಗಾಂಜಾ ಹಾಗೂ 20 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ.

ABOUT THE AUTHOR

...view details