ಬಳ್ಳಾರಿ: ಜಿಲ್ಲೆಯಲ್ಲಿ ದಿನೇ ದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಜಿಂದಾಲ್ ಕಾರ್ಖಾನೆಯಿಂದ ಕೊರೊನಾ ಸೋಂಕಿನ ಪ್ರಮಾಣ ಸಂಡೂರು ಪಟ್ಟಣದಲ್ಲಿ ಹೆಚ್ಚಾಗುತ್ತಿದೆ. ಜಿಲ್ಲೆಯಲ್ಲಿ ಈವರೆಗೆ ದಾಖಲಾದ 930 ಸೋಂಕಿತರಲ್ಲಿ ಸಂಡೂರು ತಾಲೂಕಿನಲ್ಲಿ ಸುಮಾರು 350ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ.
ಸೋಂಕಿತರ ಹೆಚ್ಚಳ: ಸಂಡೂರಿನಲ್ಲಿ ಸ್ವಯಂ ಪ್ರೇರಿತ ಜನತಾ ಲಾಕ್ಡೌನ್ ಘೋಷಣೆ - Sandur
ಸಂಡೂರು ಪಟ್ಟಣದಲ್ಲಿ ಅಂಗಡಿ ವರ್ತಕರು ಜನರ ದಟ್ಟಣೆ ತಡೆಯಲು ಬೆಳಗ್ಗೆ 7 ರಿಂದ ಮಧ್ಯಾಹ್ನ 1ರವರೆಗೆ ಮಾತ್ರ ವ್ಯಾಪಾರ ವಹಿವಾಟು ನಡೆಸಿ ಬಳಿಕ ಸ್ವಯಂ ಪ್ರೇರಿತವಾಗಿ ಜನತಾ ಲಾಕ್ಡೌನ್ ಘೋಷಣೆ ಮಾಡಿಕೊಂಡಿದ್ದಾರೆ.
ಸಂಡೂರು ಪಟ್ಟಣದಲ್ಲಿ ಸ್ವಯಂ ಪ್ರೇರಿತ ಜನತಾ ಲಾಕ್ ಡೌನ್ ಘೋಷಣೆ
ಹೀಗಾಗಿ, ಸಂಡೂರು ಪಟ್ಟಣದಲ್ಲಿ ಅಂಗಡಿ ವರ್ತಕರು ಜನರ ದಟ್ಟಣೆ ತಡೆಯಲು ಬೆಳಗ್ಗೆ 7 ರಿಂದ ಮಧ್ಯಾಹ್ನ 1ರವರೆಗೆ ಮಾತ್ರ ವ್ಯಾಪಾರ ವಹಿವಾಟು ನಡೆಸಿ ಬಳಿಕ ಸ್ವಯಂ ಪ್ರೇರಿತವಾಗಿ ಜನತಾ ಲಾಕ್ಡೌನ್ ಘೋಷಣೆ ಮಾಡಿಕೊಂಡಿದ್ದಾರೆ.
ಮಾರುಕಟ್ಟೆಯಲ್ಲಿ ಅನಗತ್ಯವಾಗಿ ಓಡಾವುದನ್ನು, ವಾಹನ ದಟ್ಟಣೆ ತಪ್ಪಿಸಲು ವರ್ತಕರು ಈ ಮಾರ್ಗ ಕಂಡುಕೊಂಡಿದ್ದಾರೆ. ಇದರಿಂದ ಸಂಡೂರು ಪಟ್ಟಣದಲ್ಲಿ ಶೇ.80 ರಷ್ಟು ಅಂಗಡಿ- ಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ಬಂದ್ ಆಗಿವೆ.