ಬಳ್ಳಾರಿ:ಜಿಲ್ಲೆಯ ಕುರುಗೋಡು ತಾಲೂಕಿನ ಸಿಂದಿಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಬೈಲೂರು ಗ್ರಾಮದ ಗ್ರಾಮ ಪಂಚಾಯತ್ ಸದಸ್ಯ ಸ್ಥಾನವನ್ನು ಹರಾಜು ಮಾಡುವ ಮೂಲಕ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಗ್ರಾ.ಪಂ. ಸದಸ್ಯರು ಆಗಬೇಕೆಂದ್ರೆ, ಯಾರು ಹೆಚ್ಚಿಗೆ ಹಣ ಕೊಡುತ್ತಾರೋ ಅಂಥವರನ್ನ ಅವಿರೋಧವಾಗಿ ಆಯ್ಕೆ ಮಾಡಲಾಗುವುದು ಎಂದು ಘೋಷಣೆ ಮಾಡುವ ಮೂಲಕ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನೇ ಕಗ್ಗೊಲೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ಸಿಂದಿಗೇರಿ ಗ್ರಾಮ ಪಂಚಾಯತ್ಗೆ ಸೇರಿದ ಬೈಲೂರು ಗ್ರಾಮದ ಎಲ್ಲ ಸದಸ್ಯ ಸ್ಥಾನಗಳು ಹರಾಜ್ ಆಗಿವೆ. ಒಟ್ಟು 26 ಸದಸ್ಯ ಸ್ಥಾನ ಹೊಂದಿರೋ ಸಿಂದಿಗೇರಿ ಗ್ರಾಮ ಪಂಚಾಯತ್ನಲ್ಲಿ 2 ರಿಂದ 5.7 ಲಕ್ಷ ರೂ. ಗಳವರೆಗೂ ಹಣ ಪಾವತಿಸಿ ಸದಸ್ಯತ್ವವನ್ನು ಪಡೆದಿದ್ದಾರೆ. ಗ್ರಾಮದ ಮಾರೆಮ್ಮನ ಗುಡಿ ಮುಂದೆ ರಾತ್ರೋರಾತ್ರಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಯಾರು ಹೆಚ್ಚಿಗೆ ಹಣ ಕೊಡುತ್ತಾರೋ, ಅವರನ್ನ ಗ್ರಾ.ಪಂ. ಸದಸ್ಯರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎನ್ನಲಾಗ್ತಿದೆ.
ಹರಾಜು ಪ್ರಕ್ರಿಯೆ ಮೂಲಕ ಆಯ್ಕೆಯಾದ ಗ್ರಾ. ಪಂ. ಸದಸ್ಯರು ಇದನ್ನು ಓದಿ:ವೈರಲ್ ವಿಡಿಯೋ : ಗ್ರಾಮ ಪಂಚಾಯಿತಿ ಸದಸ್ಯತ್ವ ಹರಾಜು ಹಾಕಿದ ಗ್ರಾಮಸ್ಥರು..!
ಅಂದಾಜು 51,20,000 ರೂ.ಗಳಿಗೆ ಈ ಹರಾಜು ಪ್ರಕ್ರಿಯೆ ನಡೆದಿದ್ದು, ಸುಮಾರು 12 ಮಂದಿ ಗ್ರಾ.ಪಂ. ಸದಸ್ಯರು ಈ ಹರಾಜು ಪ್ರಕ್ರಿಯೆಯಲ್ಲಿ ಸೇಲ್ ಆಗಿದ್ದಾರೆ ಎನ್ನಲಾಗ್ತಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್. ನಂದಿನಿ ಅವರು, ಈಗಾಗಲೇ ಕುರುಗೋಡು ತಹಶೀಲ್ದಾರ್ ಅವರಿಗೆ ಆದೇಶ ಮಾಡಲಾಗಿದೆ. ಕೂಡಲೇ ಹರಾಜಿನಲ್ಲಿ ಭಾಗಿಯಾದ ಎಲ್ಲ ಆಕಾಂಕ್ಷಿಗಳ ಮೇಲೆ ಪ್ರಕರಣ ದಾಖಲಿಸುವಂತೆ ಕಟ್ಟುನಿಟ್ಟಿನ ಸೂಚನೆಯನ್ನ ನೀಡಿದ್ದೇನೆ. ಈ ಹಿನ್ನೆಲೆ ತಹಶೀಲ್ದಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ರಾತ್ರೋರಾತ್ರಿ ಬಿಕರಿಯಾದ ಗ್ರಾಮ ಪಂಚಾಯತ್ ಸದಸ್ಯತ್ವ ಇದನ್ನು ಓದಿ:ಬಳ್ಳಾರಿಯಲ್ಲಿ ಹಾಡಹಗಲೇ ಘರ್ಷಣೆ: ಹುಡುಗಿ ವಿಚಾರಕ್ಕೆ ಎರಡು ಗುಂಪುಗಳ ಮಧ್ಯೆ ಮಾರಾಮಾರಿ!?
ಈ ಸಂಬಂಧ ಈಟಿವಿ ಭಾರತದೊಂದಿಗೆ ಮಾತನಾಡಿರುವ ಕುರುಗೋಡು ತಹಶೀಲ್ದಾರ್ ರಾಘವೇಂದ್ರರಾವ್ ಅವರು, ಇದು ನನ್ನ ಗಮನಕ್ಕೆ ಬಂದಿದೆ. ನಮ್ಮ ಎಂಸಿಸಿ ತಂಡವು ಬೈಲೂರು ಗ್ರಾಮಕ್ಕೆ ತೆರಳಿದೆ. ಆ ವಿಡಿಯೋದಲ್ಲಿರುವ ಎಲ್ಲರ ವಿರುದ್ಧವೂ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಕೇಸ್ ದಾಖಲಿಸುವುದಾಗಿ ತಿಳಿಸಿದ್ದಾರೆ.
ಗ್ರಾಮಸ್ಥರು ಹೇಳೋದೇನು?
ಬೈಲೂರು ಗ್ರಾಮದ ಗ್ರಾಮಸ್ಥರ ವಾದವೇ ಬೇರೆಯಾಗಿದೆ. ಚುನಾವಣೆ ನಡೆಸುವ ಬದಲು, ಸೂಕ್ತ ಅಭ್ಯರ್ಥಿಗಳನ್ನ ಆಯ್ಕೆ ಮಾಡಿ, ಬಂದ ಹಣದಿಂದ ದೇವಸ್ಥಾನ ಜೀರ್ಣೋದ್ಧಾರ ಮಾಡೋದಾಗಿ ತಿಳಿಸಿದ್ದಾರೆ. ಅದೇನೆ ಇರಲಿ ದುಡ್ಡಿದ್ದವರಿಗೆ ಅಧಿಕಾರ ಎಂಬುದು ಗ್ರಾಮ ಪಂಚಾಯಿತಿ ಮಟ್ಟ ದಿಂದಲೇ ಸಾಬೀತಾದಂತಾಗಿದೆ.