ಬಳ್ಳಾರಿ:ಎರಡನೇ ಶ್ರಾವಣ ಸೋಮವಾರದ ನಿಮಿತ್ತ ಜಿಲ್ಲೆಯ ಸಿರುಗುಪ್ಪ ತಾಲೂಕಿನ ದರೂರು ಗ್ರಾಮದ ಆರಾಧ್ಯ ದೈವ ವೀರ ಭದ್ರೇಶ್ವರ ಸ್ವಾಮಿಗೆ ನೂರಾರು ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.
ಭಾನುವಾರ ರಾತ್ರಿ ದೇಗುಲದ ಆವರಣದಲ್ಲಿ ನಿದ್ರಿಸಿದ ಭಕ್ತರು ಬೆಳ್ಳಂಬೆಳಗ್ಗೆ ಮಡಿ ಸ್ನಾನ ಕೈಗೊಂಡು ವೀರಭದ್ರ ಸ್ವಾಮಿಗೆ ರುದ್ರಾಭಿಷೇಕದ ವಿಶೇಷಪೂಜೆ ಸಲ್ಲಿಸಿದರು. ಬಳಿಕ ಎಲೆಪೂಜೆ ಕಟ್ಟಿಸಿದರು.
ಜಿಲ್ಲೆಯ ಬಳ್ಳಾರಿ ತಾಲೂಕಿನ ಬೇವಿನಹಳ್ಳಿ, ಸಿರುಗುಪ್ಪ ತಾಲೂಕಿನ ಹೊಳಲಗುಂದಿ, ಉತ್ತಗನೂರು, ಕರೂರು, ದರೂರು, ಹಾಗಲೂರು ಹೊಸಳ್ಳಿ ಸೇರಿದಂತೆ ನೆರೆಯ ಆಂಧ್ರಪ್ರದೇಶದ ನಾನಾ ಗ್ರಾಮಗಳಿಂದ ಕೂಡ ಭಕ್ತರು ಆಗಮಿಸಿದ್ದರು.
ಶ್ರಾವಣ ಮಾಸದ ವಿಶೇಷ ಪೂಜೆ ನಿಮಿತ್ತ ಗೋಧಿ ಹುಗ್ಗಿ, ಪಾಯಸ ನೆರೆದ ಭಕ್ತರ ಮನಸೆಳೆಯಿತು. ಅನ್ನ, ಸಾಂಬಾರ್, ಬದನೆಕಾಯಿ ಪಲ್ಯ, ಮೆಣಸಿನಕಾಯಿ ಚಟ್ನಿ, ಮಜ್ಜಿಗೆ ಪ್ರಸಾದವನ್ನು ಭಕ್ತರು ಸವಿದರು.