ಬಳ್ಳಾರಿ :ಗಣಿಜಿಲ್ಲೆಯ ಆರು ತಾಲೂಕುಗಳಿಗೆ ಡಿ.27ರಂದು ನಡೆಯಲಿರುವ 2ನೇ ಹಂತದ ಚುನಾವಣೆ ನಿಮಿತ್ತ ನಾಮಪತ್ರ ಪರಿಶೀಲನೆ ನಡೆಸಲಾಗಿದೆ. ಒಟ್ಟು 7,794 ಕ್ರಮಬದ್ಧವಾಗಿದ್ದು, 53 ನಾಮಪತ್ರ ತಿರಸ್ಕೃತವಾಗಿವೆ.
ಎರಡನೇ ಹಂತದಲ್ಲಿ ಜಿಲ್ಲೆಯ ಸಂಡೂರು, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಕೂಡ್ಲಿಗಿ, ಕೊಟ್ಟೂರು ಹಾಗೂ ಹರಪನಹಳ್ಳಿಯ 144 ಗ್ರಾಮ ಪಂಚಾಯತ್‌ಗಳಲ್ಲಿನ 2,564 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಅಂತಿಮವಾಗಿ 7,794 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದೀಗ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಎದುರಾಗಿದೆ.
ಓದಿ : ಆರೋಗ್ಯಾಧಿಕಾರಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್; ಮಂಜುನಾಥ್ ಹೇಳಿದ್ದೇನು?
ಜಿಲ್ಲೆಯ ಸಂಡೂರು ತಾಲೂಕಿನ 26 ಗ್ರಾಪಂಗಳ 511 ಸದಸ್ಯ ಸ್ಥಾನಗಳಿಗೆ 1,561, ಹಗರಿಬೊಮ್ಮನಹಳ್ಳಿ ತಾಲೂಕಿನ 19 ಗ್ರಾಪಂಗಳ 338 ಸದಸ್ಯ ಸ್ಥಾನಗಳಿಗೆ 936, ಹಡಗಲಿ ತಾಲೂಕಿನ 26 ಗ್ರಾಪಂಗಳ 430 ಸದಸ್ಯ ಸ್ಥಾನಗಳಿಗೆ 1,291,ಕೂಡ್ಲಿಗಿ ತಾಲೂಕಿನ 25 ಗ್ರಾಪಂಗಳ 482 ಸದಸ್ಯ ಸ್ಥಾನಗಳಿಗೆ 1,390, ಕೊಟ್ಟೂರು ತಾಲೂಕಿನ 13 ಗ್ರಾಪಂಗಳ 195 ಸದಸ್ಯ ಸ್ಥಾನಗಳಿಗೆ 618 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಹರಪನಹಳ್ಳಿ ತಾಲೂಕಿನ 35 ಗ್ರಾಪಂಗಳ 608 ಸದಸ್ಯ ಸ್ಥಾನಗಳಿಗೆ 1,998 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.