ಕರ್ನಾಟಕ

karnataka

ETV Bharat / state

ಶಾಲಾ ಮಕ್ಕಳ ಪ್ರವಾಸದ ಬಸ್​ ಅಪಘಾತ: ಎಕ್ಸಲ್ ಕಟ್ ಆಗಿ ಹೊರಬಂದ ಚಕ್ರಗಳು - ಈಟಿವಿ ಭಾರತ ಕನ್ನಡ

ಶಾಲಾ ಮಕ್ಕಳ ಪ್ರವಾಸದ ಬಸ್​ ಅಪಘಾತಕ್ಕೀಡಾದ ಘಟನೆ ಹಗರಿಬೊಮ್ಮನಹಳ್ಳಿಯಲ್ಲಿ ನಡೆದಿದೆ.

school-tour-bus-met-with-accident-in-hagaribommanahalli
ಶಾಲಾ ಮಕ್ಕಳ ಪ್ರವಾಸದ ಬಸ್​ ಅಪಘಾತ: ಎಕ್ಸಲ್ ಕಟ್ ಆಗಿ ಹೊರಬಂದ ಚಕ್ರಗಳು

By

Published : Dec 17, 2022, 1:20 PM IST

Updated : Dec 17, 2022, 1:49 PM IST

ಶಾಲಾ ಮಕ್ಕಳ ಪ್ರವಾಸದ ಬಸ್​ ಅಪಘಾತ

ವಿಜಯನಗರ:ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ಶಾಲಾ ಮಕ್ಕಳ ಪ್ರವಾಸದ ಬಸ್ ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್​ ಭಾರಿ ಅನಾಹುತ ತಪ್ಪಿದೆ. ರಸ್ತೆ ಗುಂಡಿಗೆ ಇಳಿದ ಪರಿಣಾಮ ಬಸ್​​ನ ಹಿಂಬದಿಯ ಎಕ್ಸಲ್ ಕಟ್ ಆಗಿದೆ.

ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆಯ ಶಾಲಾ ಮಕ್ಕಳನ್ನು ಕರೆದುಕೊಂಡು ಈ ಖಾಸಗಿ ಬಸ್ ಶನಿವಾರ ಹೊರಟಿತ್ತು. ಹಗರಿಬೊಮ್ಮನಹಳ್ಳಿಯಲ್ಲಿ ಬಸ್​​ನ ಹಿಂಬದಿಯ ಎಕ್ಸಲ್ ಕಟ್ ಆಗಿ ಹಿಂದಿನ ಎರಡೂ ಚಕ್ರಗಳು ಕಳಚಿಕೊಂಡಿವೆ. 50 ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಜೊತೆಯಲ್ಲಿ ಪ್ರವಾಸಕ್ಕೆ ತೆರಳುವಾಗ ಘಟನೆ ಸಂಭವಿಸಿದೆ.

ಬಸ್​ ಚಾಲಕನ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಇದನ್ನೂ ಓದಿ:ಮಂಡ್ಯ ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ಪ್ರಕರಣ: ಬಂಧಿತ ಮುಖ್ಯ ಶಿಕ್ಷಕ ಅಮಾನತು

Last Updated : Dec 17, 2022, 1:49 PM IST

ABOUT THE AUTHOR

...view details