ಬಳ್ಳಾರಿ: ಗಣಿ ನಗರಿ ಬಳ್ಳಾರಿಯಲ್ಲಿಯೂ ಬಹುಭಾಷಾ ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ತಮ್ಮ ಸಂಗೀತದ ರಸದೌತಣವನ್ನ ಉಣಬಡಿಸಿದ್ದಾರೆ.
ಅಯ್ಯಪ್ಪ ಸ್ವಾಮಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಎಸ್ಪಿಬಿ 2005ರ ಜೂನ್ ತಿಂಗಳಲ್ಲಿ ಬಳ್ಳಾರಿಯ ಡಾ. ರಾಜ್ ರಸ್ತೆಯ (ಅನಂತಪುರ ರಸ್ತೆ) ರಾಘವೇಂದ್ರ ಕಾಲೊನಿಯಲ್ಲಿರುವ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಅಯ್ಯಪ್ಪ ಸ್ವಾಮಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಗಾಯನದ ಸುಮಧುರ ಕಂಠಸಿರಿಗೆ ಅಯ್ಯಪ್ಪ ಸ್ವಾಮಿ ಭಕ್ತರೆಲ್ಲರೂ ಪುಳಕಿತರಾಗಿದ್ದರು. ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಮಣ್ಯಂ ಅವರೊಂದಿಗೆ ಅವರ ಸಹೋದರಿ ಎಸ್.ಪಿ.ಶೈಲಜಾ, ಪಾರ್ಥಸಾರಥಿ ಹಾಗೂ ತೆಲುಗು ನಾಯಕ ನಟ ಶ್ರೀಕಾಂತ್ ಅವರೂ ಕೂಡ ಪಾಲ್ಗೊಂಡಿದ್ದರು.
ಅಯ್ಯಪ್ಪ ಸ್ವಾಮಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಎಸ್ಪಿಬಿ ಈ ಬಗ್ಗೆ ಮಾತನಾಡಿದ ಹಿರಿಯ ಲೆಕ್ಕಪರಿಶೋಧಕ ಜಯ ಪ್ರಕಾಶ ಗುಪ್ತಾ, ಸುಮಾರು 4 ಗಂಟೆಗಳ ಕಾಲ ಈ ಸಂಗೀತದ ರಸದೌತಣ ಉಣಬಡಿಸಿದ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ನಮ್ಮ ಮನೆಗೆ ಬಂದು ಕಾಫಿ ಸೇವನೆ ಮಾಡಿದ್ದರು. ಅಂತಹ ಸರಳ, ಸಜ್ಜನಿಕೆಯ ಖ್ಯಾತ ಗಾಯಕರನ್ನ ನಾವಿಂದು ಕಳೆದುಕೊಂಡಿದ್ದೇವೆ. ಎಸ್.ಪಿ.ಬಾಲಸುಬ್ರಹ್ಮಣ್ಯಂ ಇನ್ನಿಲ್ಲ ಎಂಬ ಅಘಾತಕಾರಿ ಸುದ್ದಿ ಕೇಳೋದೇ ಒಂದು ದುಖಃಕರ ಸಂಗತಿಯಾಗಿದೆ. ಸಂಗೀತ ಲೋಕದ ಸ್ವರ ಮಾಂತ್ರಿಕರಾಗಿದ್ದ ಎಸ್ಪಿಬಿ ಅವರು ಇಡೀ ದೇಶಕ್ಕೆ ದೊಡ್ಡ ಆಸ್ತಿಯಾಗಿದ್ದರು ಎಂದು ಜಯ ಪ್ರಕಾಶ ಗುಪ್ತಾ ಕಂಬಿನಿ ಮಿಡಿದಿದ್ದಾರೆ.
ಅಯ್ಯಪ್ಪ ಸ್ವಾಮಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಎಸ್ಪಿಬಿ ಎರಡು ತಿಂಗಳ ಹಿಂದಷ್ಟೇ ಚೆನ್ನೈನ ಏರ್ಪೋರ್ಟ್ನಲ್ಲಿ ನನಗೆ ಭೇಟಿಯಾಗಿದ್ದರು. ನಾನು ಅವರಿಗೆ ಹಲೋ ಸರ್ ಎಂದೆ. ಆಗ ಅವರು ನನ್ನನ್ನ ನೋಡಿ ನಸುನಕ್ಕರು. ನನಗೂ ಅವರಿಗೂ ಅಷ್ಟೊಂದು ಪರಿಚಯ ಇರಲಿಲ್ಲ. ಆದರೂ ಅವರು ನನ್ನ ನೋಡಿ ನಸುನಕ್ಕಿರೋದೇ ನನಗೊಂದಿಷ್ಟು ಖುಷಿ ಎನಿಸಿತು. ಆದರೆ ಅವರು ಇಂದು ನಮ್ಮೊಂದಿಗೆ ಇಲ್ಲ ಎಂಬ ಸುದ್ದಿ ಕೇಳುವುದೇ ನನಗೆ ವೈಯಕ್ತಿಕವಾಗಿ ದುಖಃಕರ ಸಂಗತಿ ಎಂದು ಹಿರಿಯ ಲೆಕ್ಕಪರಿಶೋಧಕ ಸಿರಿಗೇರಿ ಪನ್ನರಾಜ ಸಂತಾಪ ಸೂಚಿಸಿದ್ದಾರೆ.