ಕರ್ನಾಟಕ

karnataka

ETV Bharat / state

ಬಳ್ಳಾರಿಯಲ್ಲಿ ಯುವ ಜನರೊಂದಿಗೆ  ಸಂತೋಷ ಹೆಗ್ಡೆ ಸಂವಾದ - \interaction with youths

ಬಳ್ಳಾರಿಯ ಕ್ಯಾಥೋಲಿಕ್ ಚರ್ಚ್​ನ ಆರೋಗ್ಯ ಮಾತೆ ಪುಣ್ಯಕ್ಷೇತ್ರದ ಆವರಣದಲ್ಲಿ ಇಂದು ನಡೆದ 'ಯುವ ಜನರೊಂದಿಗೆ ಸಂವಾದ' ಕಾರ್ಯಕ್ರಮದಲ್ಲಿ, ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ ಹೆಗ್ಡೆ ಯುವಜನತೆಯ ಪ್ರಶ್ನೆಗಳಿಗೆ ಉತ್ತರಿಸಿದರು.

bly

By

Published : Oct 26, 2019, 9:14 PM IST

Updated : Oct 26, 2019, 9:36 PM IST

ಬಳ್ಳಾರಿ:ಸತತ ಏಳು ವರ್ಷಗಳ ಮೇಲ್ಪಟ್ಟು ಅಪರಾಧ ಪ್ರಕರಣದಲ್ಲಿ ಭಾಗಿಯಾಗಿರೋದು ಕೊನೆಯ ಹಂತದ ನ್ಯಾಯಾಲಯದಲ್ಲಿ ಸಾಬೀತಾದ್ರೆ ಯಾರೊಬ್ಬರೂ ಕೂಡ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂಬ ಕಾನೂನು ಇದೆಯಾದರೂ, ಪ್ರಸ್ತುತ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆಯೇ ಇಲ್ಲ ಎಂದು ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ ಹೆಗ್ಡೆ ಹೇಳಿದರು.

ಬಳ್ಳಾರಿಯ ಕ್ಯಾಥೋಲಿಕ್ ಚರ್ಚ್​ನ ಆರೋಗ್ಯ ಮಾತೆ ಪುಣ್ಯಕ್ಷೇತ್ರದ ಆವರಣದಲ್ಲಿ ಇಂದು ನಡೆದ 'ಯುವ ಜನರೊಂದಿಗೆ ಸಂವಾದ' ಕಾರ್ಯಕ್ರಮದಲ್ಲಿ, ರಾಯಚೂರು ಜಿಲ್ಲೆಯ ಸಿಂಧನೂರು ಮೂಲದ ಯುವತಿಯೊಬ್ಬಳು "ಜೈಲಿಗೆ ಹೋಗಿ ಬಂದವರೆಲ್ಲರೂ ಚುನಾವಣೆಯಲ್ಲಿ ಸ್ಪರ್ಧಿಸಬಹುದಾ? ಅವರ ಸ್ಪರ್ಧೆಗೆ ಕಾನೂನಿನಲ್ಲಿ ಅವಕಾಶ ಇದೆಯಾ ಎಂಬ ಪ್ರಶ್ನೆಯೊಂದಕ್ಕೆ ನಿವೃತ್ತ ನ್ಯಾ. ಸಂತೋಷ ಹೆಗ್ಡೆ ಈ ರೀತಿಯಾಗಿ ಉತ್ತರಿಸಿದರು.

ಯುವಜನರೊಂದಿಗೆ ಸಂವಾದ ನಡೆಸುತ್ತಿರುವ ನ್ಯಾ.ಸಂತೋಷ ಹೆಗ್ಡೆ

ಯಾವುದೇ ಪಕ್ಷದ ರಾಜಕಾರಣಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರೋದನ್ನು ಸಾಬೀತುಪಡಿಸಲು ಅರ್ಧ ದಶಕಗಳೇ ಬೇಕಾಗುತ್ತೆ. ಅಷ್ಟರೊಳಗೆ ಆ ರಾಜಕಾರಣಿ ಸಚಿವಗಿರಿ, ಮುಖ್ಯಮಂತ್ರಿ, ಕೇಂದ್ರದ ಸಚಿವಗಿರಿ ಹಾಗೂ ಪ್ರಧಾನಿಯಾದ್ರೂ ಅಚ್ಚರಿ ಏನಿಲ್ಲ. ಅಂತಹ ನ್ಯಾಯಾಂಗದ ವ್ಯವಸ್ಥೆಯಲ್ಲಿ ನಾವಿದ್ದೇವೆ. ಅವನು ಭಾಗಿಯಾಗಿರೋ ಅಪರಾಧ ಪ್ರಕರಣಗಳಲ್ಲಿ ತಪ್ಪಿತಸ್ಥನೆಂದು ಸಾಬೀತುಪಡಿಸಲು ಕನಿಷ್ಠ 50 ವರ್ಷಗಳೇ ಕಳೆದು ಹೋಗುತ್ತೆ. ಆ ರಾಜಕಾರಣಿ ಆಯುಷ್ಯವೂ ಮುಗಿದು ಹೋಗಿರುತ್ತೆ. ಇಂತಹ ನ್ಯಾಯಾಂಗ ವ್ಯವಸ್ಥೆ ನಮ್ಮಲ್ಲಿದೆ. ಆದ್ದರಿಂದ ಅವರಿಗೆ ಭಯ ಇಲ್ಲದಂತಾಗಿದೆ. ಹಾಗಾಗಿ, ಮೊದಲು ಈ ಸಮಾಜವನ್ನು ಬದಲಿಸಬೇಕಿದೆ. ಪ್ರಾಮಾಣಿಕ ವ್ಯಕ್ತಿಗೆ ತಮ್ಮ ಅಮೂಲ್ಯವಾದ ಮತಗಳನ್ನು ಹಾಕಿ ಗೆಲ್ಲಿಸಬೇಕು. ಯಾವುದೇ ಜಾತಿ, ಧರ್ಮವನ್ನು ಲೆಕ್ಕಿಸಬಾರದು. ಆ ವ್ಯಕ್ತಿ ಪ್ರಾಮಾಣಿಕನಾದರೆ ಸಾಕು, ಅಂಥವರನ್ನು ನೀವು ಗೆಲ್ಲಿಸಿಕೊಡಬೇಕು ಆಗ ತನ್ನಿಂದತಾನೆ ಬದಲಾವಣೆ ಬರುತ್ತದೆ.

ಪ್ರಾಮಾಣಿಕ ಅಧಿಕಾರಿಗಳ ವರ್ಗಾವಣೆ ಏಕೆ ಆಗುತ್ತೆ ಎಂಬುದೇ ತಿಳಿಯುತ್ತಿಲ್ಲ ಎಂದು ರಾಯಚೂರು ಜಿಲ್ಲೆ ಮೂಲದ ಮತ್ತೊಬ್ಬ ಯುವಕ ಪ್ರಶ್ನಿಸಿದ್ರು. ಅದಕ್ಕೆ ಉತ್ತರಿಸಿದ ನಿವೃತ್ತ ನ್ಯಾ.ಸಂತೋಷ ಹೆಗ್ಡೆ, ಇಂದಿನ ರಾಜಕಾರಣಿಗಳಿಗೆ ಪ್ರಾಮಾಣಿಕ ಅಧಿಕಾರಿಗಳ ಅಗತ್ಯವಿಲ್ಲ. ಪ್ರಾಮಾಣಿಕರನ್ನು ವರ್ಗಾಯಿಸಿ ಅಪ್ರಾಮಾಣಿಕರನ್ನು ನೇಮಿಸುವಾಗ ನನಗೇನಿದೆ ಎಂಬ ವಿಚಾರವನ್ನು ಮಾತ್ರ ಮಾಡುತ್ತಾರೆ. ಈ ದೇಶ ಅಥವಾ ಆತನ ಕ್ಷೇತ್ರದ ಅಭಿವೃದ್ಧಿಯ ಕುರಿತು ಕಿಂಚಿತ್ತೂ ಯೋಚನೆ ಮಾಡೋಲ್ಲ. ಅಲ್ಲಿಯೂ ಕೂಡ ಜನಪ್ರತಿನಿಧಿಗಳ ಸ್ವಾರ್ಥ ಇದೆ ಎಂದು ವಿಷಾದಿಸಿದರು.



Last Updated : Oct 26, 2019, 9:36 PM IST

ABOUT THE AUTHOR

...view details