ಬಳ್ಳಾರಿ: ತಾಲೂಕಿನ ಕಪ್ಪಗಲ್ಲು, ಸಿರಿವಾರ, ಶ್ರೀಧರಗಡ್ಡೆ, ಜಾಲಿಬೆಂಚೆ ಹೊಲಗಳಲ್ಲಿ ಬೀಡು ಬಿಟ್ಟ 30 ಕುರಿ ಕಾಯುವವರಿಗೆ ಸನ್ಮಾರ್ಗ ಗೆಳೆಯರ ಬಳಗದಿಂದ ಆಹಾರಧಾನ್ಯ ವಿತರಣೆ ಮಾಡಲಾಯಿತು.
ಕುರಿಗಾಹಿಗಳಿಗೆ ಆಹಾರಧಾನ್ಯ ವಿತರಿಸಿದ ಸನ್ಮಾರ್ಗ ಗೆಳೆಯರ ಬಳಗ - ಸನ್ಮಾರ್ಗ ಗೆಳೆಯರ ಬಳಗ
ಕಪ್ಪಗಲ್ಲು, ಸಿರಿವಾರ, ಶ್ರೀಧರಗಡ್ಡೆ, ಜಾಲಿಬೆಂಚೆ ಹೊಲಗಳಲ್ಲಿ ಬೀಡು ಬಿಟ್ಟ 30 ಕುರಿ ಕಾಯುವವರಿಗೆ ಸನ್ಮಾರ್ಗ ಗೆಳೆಯರ ಬಳಗದಿಂದ ಆಹಾರಧಾನ್ಯ ವಿತರಣೆ ಮಾಡಲಾಯಿತು.

ಆಹಾರ ಧಾನ್ಯ ವಿತರಣೆ ಮಾಡಿ ಮಾತನಾಡಿದ ಗ್ರಾಮೀಣ ಠಾಣೆಯ ಪೊಲೀಸ್ ಸಬ್ ಇನ್ಸ್ಫೆಕ್ಟರ್ ವೈ.ಎಸ್.ಹನಮಂತಪ್ಪ, ಸನ್ಮಾರ್ಗ ಗೆಳೆಯರ ಬಳಗ ಸದಾ ವಿಶೇಷ ರೀತಿಯಲ್ಲಿ ಸಮಾಜ ಸೇವೆಗೆ ಸನ್ನದ್ಧವಾಗಿ ಇರುತ್ತದೆ ಎನ್ನುವುದಕ್ಕೆ ತಾಜ ಉದಾಹರಣೆ. ಬೇರೆ ಊರುಗಳಿಂದ ಬಂದವರನ್ನು ಗುರುತಿಸಿ ಅವರಿಗೆ ಅಗತ್ಯ ವಸ್ತುಗಳನ್ನು ನೀಡುತ್ತಿರುವುದು ಅಭಿನಂದನಾರ್ಹ ಎಂದು ತಿಳಿಸಿದರು.
ಬಳ್ಳಾರಿ ಆರ್.ಟಿ.ಒ ಶ್ರಿಧರ ಕೆ.ಮಲ್ಲಾಡ್ ಮಾತನಾಡಿ ಎಲ್ಲಾ ಸಂಘ ಸಂಸ್ಥೆಗಳು ಬರೀ ನಗರದಲ್ಲಿ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಆದರೆ, ಸನ್ಮಾರ್ಗ ನಮ್ಮ ಹಳ್ಳಿಗಾಡಿನ ಜನರ ಬಗ್ಗೆ ಗಮನಹರಿಸಿ ಅವರಿಗೆ ಅಗತ್ಯ ವಸ್ತುಗಳನ್ನು ನೀಡುವ ಕಾರ್ಯದಲ್ಲಿ ನಾವು ಬಾಗಿಯಾಗಿದ್ದು, ನಮ್ಮ ಅದೃಷ್ಟ ಎಂದರು.