ಹೊಸಪೇಟೆ: ಬೆಳಗಾವಿಯ ಖಾನಾಪುರದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಹಾಗೂ ರಾಷ್ಟ್ರ ಧ್ವಜ ಕಿತ್ತು ಹಾಕಿ ಅಗೌರವ ತೋರಿದ ವಡಗಾವಿ ಪೊಲೀಸ್ ಠಾಣೆಯ ಪಿಎಸ್ಐ ಶಿವರೆಡ್ಡಿ ಅವರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಸಂಗೊಳ್ಳಿ ರಾಯಣ್ಣ ಸಾಮಾಜಿಕ ಶೈಕ್ಷಣಿಕ ಸೇವಾ ಟ್ರಸ್ಟ್ ಹಾಗೂ ನಾನಾ ಸಂಘಟನೆಗಳು ಪದಾಧಿಕಾರಿಗಳು ಇಂದು ನಗರದ ಉಪವಿಭಾಗಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ರಾಯಣ್ಣ ಹಾಗೂ ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ ಪಿಎಸ್ಐನ್ನು ಅಮಾನಗೊಳಿಸಲು ಆಗ್ರಹ - hospet protest news
ಹೊಸಪೇಟೆಯಲ್ಲಿ ಸಂಗೊಳ್ಳಿ ರಾಯಣ್ಣ ಸಾಮಾಜಿಕ ಶೈಕ್ಷಣಿಕ ಸೇವಾ ಟ್ರಸ್ಟ್ ಹಾಗೂ ನಾನಾ ಸಂಘಟನೆಗಳು ಪದಾಧಿಕಾರಿಗಳು ಬೆಳಗಾವಿಯ ಖಾನಾಪುರದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಧಕ್ಕೆ ಹಾಗೂ ರಾಷ್ಟ್ರ ಧ್ವಜ ಕಿತ್ತು ಹಾಕಿ ಅಗೌರವ ತೋರಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
![ರಾಯಣ್ಣ ಹಾಗೂ ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ ಪಿಎಸ್ಐನ್ನು ಅಮಾನಗೊಳಿಸಲು ಆಗ್ರಹ hospet](https://etvbharatimages.akamaized.net/etvbharat/prod-images/768-512-8541809-220-8541809-1598283670138.jpg)
ತ್ಯಾಗ, ಬಲಿದಾನಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹೆಸರುವಾಸಿ. ಅಲ್ಲದೇ, ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯದ ರಣಕಹಳೆ ಮೊಳಗಿಸಿದವರು. ಅಪ್ರತಿಮ ಹೋರಾಟಗಾರ ದೇಶ ಪ್ರೇಮಿ ಕಿತ್ತೂರು ರಾಣಿ ಚೆನ್ನಮ್ಮಳ ದತ್ತು ಪುತ್ರರಾಗಿ ಬೆನ್ನಿಗೆ ನಿಂತವರು. ಇದನ್ನು ಅರಿತುಕೊಳ್ಳದೇ ಸಂಗೊಳ್ಳಿ ರಾಯಣ್ಣ ಹಾಗೂ ರಾಷ್ಟ್ರ ಧ್ವಜಕ್ಕೆ ಅಗೌರವ ತೋರಿದ ಪಿಎಸ್ಐ ಶಿವರೆಡ್ಡಿಯನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು. ಇದೇ ವೇಳೆಯಲ್ಲಿ ಉಪವಿಭಾಗ ಕಚೇರಿಯ ತಹಶೀಲ್ದಾರ್ ಪ್ರತಿಭಾ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸಂಗೊಳ್ಳಿ ರಾಯಣ್ಣ ಸಾಮಾಜಿಕ ಶೈಕ್ಷಣಿಕ ಸೇವಾ ಟ್ರಸ್ಟ್, ಕುರುಬರ ಪಡೆ, ಕುರುಬರ ಸಂಘಟನೆಗಳು ಹಾಗೂ ಕುರುಬ ಸಮಾಜದ ಪದಾಧಿಕಾರಿಗಳು ಭಾಗಿಯಾಗಿದ್ದರು.