ಕರ್ನಾಟಕ

karnataka

ETV Bharat / state

₹28 ಲಕ್ಷ ಮೌಲ್ಯದ 270 ಕೆಜಿ ಗಂಧದ ಕಟ್ಟಿಗೆ ಅಕ್ರಮ ಸಾಗಾಟ.. ಮೂವರು ಆರೋಪಿಗಳ ಬಂಧನ..

8 ಲಕ್ಷ ರೂ. ಮೌಲ್ಯದ ಜಿನಾನ್ ಪಿಕ್​-ಅಪ್​ ವಾಹನ, 6 ಲಕ್ಷ ರೂ. ಮೌಲ್ಯದ ಟಯೋಟಾ ಗ್ಲಾಂಜಾ ಕಾರು ಸೇರಿದಂತೆ ಒಟ್ಟು 42,08,000 ರೂ. ಗಂಧದ ಕಟ್ಟಿಗೆ ಹಾಗೂ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಈ ಜಾಲವನ್ನು ಬೇಧಿಸಿದ ಇಡೀ ತಂಡಕ್ಕೆ ಹಾಗೂ ಅಧಿಕಾರಿಗಳನ್ನು ಎಸ್​ಪಿ ಸೈದಲು ಅಡಾವತ್ ಅವರು ಅಭಿನಂದಿಸಿ, ನಗದು ಬಹುಮಾನವನ್ನು ಘೋಷಿಸಿದ್ದಾರೆ..

sandalwood-smugglers-arrested-in-bellary
ಮೂವರ ಆರೋಪಿ ಬಂಧನ

By

Published : Oct 17, 2021, 9:12 PM IST

ಬಳ್ಳಾರಿ :ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ 28,08,000 ರೂ.‌ ಮೌಲ್ಯದ 270 ಕೆಜಿ ಶ್ರೀಗಂಧದ ಕಟ್ಟಿಗೆಗಳನ್ನು 3 ಜನ ಆರೋಪಿಗಳು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಸಂಡೂರಿನ ಪೊಲೀಸರು ಇಂದು ಬೆಳಗಿನ ಜಾವ ಇವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

28 ಲಕ್ಷ ಮೌಲ್ಯದ 270 ಕೆಜಿ ಗಂಧದ ಕಟ್ಟಿಗೆ

ಸಂಡೂರು-ಹೊಸಪೇಟೆ ರಸ್ತೆಯಲ್ಲಿ ಬರುವ ಬಾವಿಹಳ್ಳಿ ಕ್ರಾಸ್ ಬಳಿ ಸುಶೀಲಾನಗರ ತಾಂಡಾದ ಇ. ಆರ್ ರಾಮ ಲೀನಾನಾಯ್ಕ್, ಆರ್. ಮಂಜುನಾಥ್ ನಾಯ್ಕ್, ಕಿರಣ್ ನಾಯ್ಕ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.

ಪತ್ರಿಕಾ ಪ್ರಕಟಣೆ

ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಡಿಎಸ್​ಪಿ ಮಲ್ಲೇಶ್ ದೊಡ್ಡಮನಿ ಹಾಗೂ ಡಿಸಿಆರ್​​ಬಿ ಹಾಗೂ ಅವರ ನೇತೃತ್ವದ ತಂಡ ಹಾಗೂ ಸಂಡೂರು ಠಾಣೆ ಅಧಿಕಾರಿ ಹಾಗೂ ಸಿಬ್ಬಂದಿ ಭಾಗವಹಿಸಿದ್ದಾರೆ. ಈ ವೇಳೆ ಇತರೆ ಆರೋಪಿಗಳು ಪರಾರಿಯಾಗಿದ್ದಾರೆ.

ಪತ್ರಿಕಾ ಪ್ರಕಟಣೆ

8 ಲಕ್ಷ ರೂ. ಮೌಲ್ಯದ ಜಿನಾನ್ ಪಿಕ್​-ಅಪ್​ ವಾಹನ, 6 ಲಕ್ಷ ರೂ. ಮೌಲ್ಯದ ಟಯೋಟಾ ಗ್ಲಾಂಜಾ ಕಾರು ಸೇರಿದಂತೆ ಒಟ್ಟು 42,08,000 ರೂ. ಗಂಧದ ಕಟ್ಟಿಗೆ ಹಾಗೂ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಈ ಜಾಲವನ್ನು ಬೇಧಿಸಿದ ಇಡೀ ತಂಡಕ್ಕೆ ಹಾಗೂ ಅಧಿಕಾರಿಗಳನ್ನು ಎಸ್​ಪಿ ಸೈದಲು ಅಡಾವತ್ ಅವರು ಅಭಿನಂದಿಸಿ, ನಗದು ಬಹುಮಾನವನ್ನು ಘೋಷಿಸಿದ್ದಾರೆ.

ಓದಿ:ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ: ಸಿದ್ದರಾಮಯ್ಯಗೆ ಅಚ್ಛೇದಿನ್ ಬರಲ್ಲ ಎಂದ ಸಿಎಂ

ABOUT THE AUTHOR

...view details