ಕರ್ನಾಟಕ

karnataka

ETV Bharat / state

11 ಲಾರಿಗಳಲ್ಲಿ ಮರಳು ಸಾಗಾಟ... ಪುರಸಭೆ ಸದಸ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಂದ ತಡೆ - 11 ಲಾರಿಗಳಲ್ಲಿ ಮರಳು ಸಾಗಾಟ

ದೇಶಾದ್ಯಂತ ಕೊರೊನಾ ಲಾಕ್​ಡೌನ್​ ಜಾರಿಯಾಗಿ ಬಹುತೇಕ ಎಲ್ಲಾ ಚಟುವಟಿಕೆಗಳು ಸ್ಥಗಿತಗೊಂಡಿವೆ. ಆದರೆ ಬಳ್ಳಾರಿಯಲ್ಲಿ ಮರಳು ಗಣಿಗಾರಿಕೆ ಮಾತ್ರ ಮುಂದುವರಿಯುತ್ತಿರುವುದು ಬೆಳಕಿಗೆ ಬಂದಿದೆ.

sand mafiya continuing during lockdown in bellary
11 ಲಾರಿಗಳಲ್ಲಿ ಮರಳು ಸಾಗಾಟ

By

Published : Apr 13, 2020, 9:47 AM IST

ಬಳ್ಳಾರಿ: ಕೊರೊನಾ ವೈರಸ್ ಮುಂಜಾಗ್ರತೆ ದೃಷ್ಟಿಯಿಂದ ರಾಜ್ಯ ಸರ್ಕಾರ ಲಾಕ್ ಡೌನ್ ಜಾರಿ ಮಾಡಿದ್ದು, ಜಿಲ್ಲೆಯಲ್ಲಿ ಎಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಂಡಿವೆ. ಆದರೆ ಮರಳು ಸಾಗಾಟ ಮಾತ್ರ ನಿಂತಿಲ್ಲ.

11 ಲಾರಿಗಳಲ್ಲಿ ಮರಳು ಸಾಗಾಟ
ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಉಡೇಗೋಳ ಗ್ರಾಮದ ಬಳಿ‌ ಇರುವ ಸ್ಟಾಕ್ ಪಾಯಿಂಟ್ ನಿಂದ ಕುರುಗೋಡು ಕುಡತಿನಿ ಮಾರ್ಗವಾಗಿ ಜಿಂದಾಲ್ ಕಾರ್ಖಾನೆಗೆ ಪ್ರತಿನಿತ್ಯ 11 ಕ್ಕೂ ಅಧಿಕ ಟಿಪ್ಪರ್ ಲಾರಿಗಳಲ್ಲಿ ಮರಳು ಸಾಗಿಸುತ್ತಿದ್ದಾರೆ. ದ್ವಿಚಕ್ರ ವಾಹನಗಳು ರಸ್ತೆಗಿಳಿಯದಂತೆ ಕ್ರಮಕೈಗೊಳ್ಳಲು ಜಿಲ್ಲಾಡಳಿತ ಸೂಚಿಸಿದೆ. ಆದರೆ ಮರಳು ಸಾಗಾಣಿಕೆಗೆ ಅನುಮತಿ ನೀಡಿರುವುದು ಯಾವ ನ್ಯಾಯ ? ಎಂದು ಪುರಸಭೆ ಸದಸ್ಯರಾದ ಜೆ.ಮಹೇಶ್ ಮತ್ತು ಎನ್.ನಾಗರಾಜ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬಂಗಿ ಮಲ್ಲಯ್ಯ ಮತ್ತು ಜೆ.ಓಂಕಾರಪ್ಪ ಪ್ರಶ್ನಿಸಿದ್ದಾರೆ. ಕೂಡಲೇ ಮರಳು ಸಾಗಾಣಿಕೆ ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.ಪುರಸಭೆ ಸದಸ್ಯರು ಟಿಪ್ಪರ್ ಲಾರಿಗಳನ್ನು ತಡೆದಿದ್ದ ಸ್ಥಳಕ್ಕೆ ಭೇಟಿ ನೀಡಿದ ಕಂದಾಯ ಮತ್ತು ಪೊಲೀಸ್ ಅಧಿಕಾರಿಗಳು ಮರಳು ತುಂಬಿದ ವಾಹನಗಳು ಈ‌ ಮಾರ್ಗವಾಗಿ ಬಂದರೆ ವಶಪಡಿಸಿಕೊಳ್ಳಲಾಗುವುದು ಎಂದು ಚಾಲಕರಿಗೆ ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details