ಬಳ್ಳಾರಿ/ಸಿರುಗುಪ್ಪ: ಜನರಲ್ಲಿನ ಅಜ್ಞಾನ, ಅಂಧಕಾರ, ಅಸಮಾನತೆ, ಜಾತಿ ಪದ್ಧತಿ ಮತ್ತು ಧರ್ಮಾಂಧತೆಗಳನ್ನು ತೊಡೆದುಹಾಕಲು ಹಲವು ಜನ ಸಾಂಸ್ಕೃತಿಕ ನಾಯಕರು, ಮೇಧಾವಿಗಳು ಹೋರಾಡಿದ್ದಾರೆ. ಅಂಥವರಲ್ಲಿ ಸಂತ ಸೇವಾಲಾಲ್ ಪ್ರಮುಖರು ಎಂದು ಸಿರಗುಪ್ಪ ತಹಶೀಲ್ದಾರ್ ಸತೀಶ್ ಬಿ. ಕೂಡಲಗಿ ಹೇಳಿದರು.
ಸಿರಗುಪ್ಪದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಸಂತ ಸೇವಾಲಾಲರ 283ನೇ ಜಯಂತ್ಯೋತ್ಸವ ಸಮಾರಂಭದಲ್ಲಿ ಸೇವಾಲಾಲರ ಭಾವಚಿತ್ರಕ್ಕೆ ಮಾಲಾರ್ಪಣೆ ಸಲ್ಲಿಸಿ ಅವರು ಮಾತನಾಡಿದರು. ಸೇವಾಲಾಲ್ ಅವರ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಜೀವನ ಸಾಗಿಸಿ ಎಂದರು.