ಬಳ್ಳಾರಿ: ನಟರ ಜನ್ಮದಿನಕ್ಕೆ ಕೇಕ್ ಕತ್ತರಿಸುವುದು ಹಾಗೂ ಕಟೌಟ್ಗೆ ಹಾಲಿನ ಅಭಿಷೇಕ ಮಾಡುವುದು ಸರ್ವೇ ಸಾಮಾನ್ಯ. ಆದರೆ, ನಟ ಸುದೀಪ್ ಹುಟ್ಟುಹಬ್ಬ ಹಿನ್ನೆಲೆ ಜಿಲ್ಲೆಯ ಸಂಡೂರು ತಾಲೂಕಿನ ಬಂಡ್ರಿ ಗ್ರಾಮದಲ್ಲಿ ಕೋಣವನ್ನು ಬಲಿ ನೀಡಿ ರಕ್ತಾಭಿಷೇಕ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಸುದೀಪ್ ಜನ್ಮದಿನ ಆಚರಣೆ: ಅಭಿಮಾನಿಗಳಿಂದ ಕಿಚ್ಚನ ಕಟೌಟ್ಗೆ ಕೋಣನ ರಕ್ತಾಭಿಷೇಕ! - ಸುದೀಪ್ ಅವರ ಕಟೌಟ್ ಮುಂದೆ ಕೋಣವನ್ನು ಬಲಿ
ಸುದೀಪ್ ಜನ್ಮ ದಿನ ಹಿನ್ನೆಲೆ ಅವರ ಕಟೌಟ್ ಮುಂದೆ ಕೋಣವೊಂದನ್ನು ಬಲಿ ಕೊಡಲಾಗಿದೆ. ಇದನ್ನು ವಿಡಿಯೋ ಮಾಡಲಾಗಿದ್ದು, ಸಾರ್ವಜನಿಕರ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಅಭಿಮಾನಿಗಳಿಂದ ಕಿಚ್ಚನ ಕಟೌಟ್ಗೆ ಕೋಣನ ರಕ್ತಾಭಿಷೇಕ
ಸುದೀಪ್ ಅವರ ಕಟೌಟ್ ಮುಂದೆ ಕೋಣವನ್ನು ಬಲಿ ನೀಡಿ ಹುಟ್ಟಹಬ್ಬವನ್ನು ಆಚರಿಸಲಾಗಿದೆ. ಕೋಣ ಕಡಿಯುವುದನ್ನು ವಿಡಿಯೋ ಮಾಡಲಾಗಿದ್ದು, ಅದು ಸಾಕಷ್ಟು ಸದ್ದು ಮಾಡುತ್ತಿದೆ.
ಸುದೀಪ್ ಅಭಿಮಾನಿಗಳಿಂದ ಪ್ರಾಣಿ ಹಿಂಸೆ ಆಗಿರುವುದು ಪ್ರಾಣಿದಯಾ ಸಂಘದಿಂದ ಆಕ್ಷೇಪ ವ್ಯಕ್ತವಾಗಿದೆ. ಹುಟ್ಟುಹಬ್ಬ ಸಂದರ್ಭದಲ್ಲಿ ಈ ರೀತಿಯಾಗಿ ಹುಚ್ಚಾಟ ಮೆರೆಯುವುದು ಸರಿಯಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated : Sep 2, 2021, 6:12 PM IST