ಕರ್ನಾಟಕ

karnataka

ETV Bharat / state

ಶಾಸಕ ಆನಂದ್​​ ಸಿಂಗ್​ರನ್ನ ಭೇಟಿಯಾಗಿ ಕ್ಷಮೆಯಾಚಿಸಿದ ಗಣೇಶ್​​!? - undefined

ಕಂಪ್ಲಿ ಶಾಸಕ‌ ಜೆ.ಎನ್.ಗಣೇಶ್​​ ಅವರು ಹೊಸಪೇಟೆ ನಗರದ ದೇಗುಲದಲ್ಲಿಂದು ಶಾಸಕ‌ ಆನಂದ ಸಿಂಗ್ ಅವರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಶಾಸಕ

By

Published : Apr 27, 2019, 11:02 PM IST

ಬಳ್ಳಾರಿ:ಈಗಲ್​ಟನ್​ ರೆಸಾರ್ಟ್​ನಲ್ಲಿ ನಡೆದ ಗಲಾಟೆ ಪ್ರಕರಣದ ಹಿನ್ನೆಲೆಯಲ್ಲಿ ಜೈಲು ಸೇರಿದ್ದ ಕಂಪ್ಲಿ ಶಾಸಕ‌ ಜೆ.ಎನ್.ಗಣೇಶ್​​ ಜಾಮೀನು ಪಡೆದು ತವರೂರಾದ ಹೊಸಪೇಟೆಗೆ ಆಗಮಿಸಿದ್ದು, ಹೊಸಪೇಟೆ ನಗರದ ದೇಗುಲದಲ್ಲಿಂದು ಶಾಸಕ‌ ಆನಂದ್​ ಸಿಂಗ್ ಅವರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಹೊಸಪೇಟೆ ಪಟೇಲ್ ನಗರದ ಕೃಷ್ಣಾ ಮಂದಿರದಲ್ಲಿದ್ದ ಶಾಸಕ ಆನಂದ್​​ ಸಿಂಗ್ ಅವರನ್ನ ಭೇಟಿಯಾದ ಶಾಸಕ ಗಣೇಶ, ಕಾಲಿಗೆ ಎರಗಿ ಕ್ಷಮೆಯಾಚಿಸಿದ್ದಾರೆಂದು ಶಾಸಕರಿಬ್ಬರ ಆಪ್ತ ವಲಯಗಳು ತಿಳಿಸಿವೆ. ತಮ್ಮ ಕಾರು ಚಾಲಕರೊಂದಿಗೆ ಶಾಸಕ ಗಣೇಶ ಅವರು ಈ ದಿನ ಬೆಳಿಗ್ಗೆ ದೇಗುಲಕ್ಕೆ ಆಗಮಿಸಿದರು.‌ ದೇಗುಲದ ನಿರ್ಜನ‌ ಪ್ರದೇಶದಲ್ಲಿ ಕುಳಿತಿದ್ದ ಶಾಸಕ ಆನಂದ್​ ಸಿಂಗ್ ಅವರನ್ನು ಭೇಟಿಯಾದರು. ಬಳಿಕ, ಆನಂದ್​ ಸಿಂಗ್ ಅವರ ಕಾಲಿಗೆ ಎರಗಿದ ಗಣೇಶ, ಸುಮಾರು ಅರ್ಧ ಗಂಟೆಗಳ ಕಾಲ‌ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್ ಹೈಕಮಾಂಡ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್​​ ಗುಂಡೂರಾವ್, ಉಪಾಧ್ಯಕ್ಷ ಎನ್.ಸೂರ್ಯನಾರಾಯಣ ರೆಡ್ಡಿ ಹಾಗೂ ಹಾಲಿ ಸಂಸದ ಉಗ್ರಪ್ಪ ಮತ್ತು‌‌ ಮಾಜಿ ಸಿಎಂ ಸಿದ್ದರಾಮಯ್ಯನವರು ಸಂಧಾನದ ಮಾತುಕತೆ ಮೂಲಕ ಅವರಿಬ್ಬರ ನಡುವಿನ ವೈಮನಸ್ಸನ್ನ ಬಗೆಹರಿಸುವುದಾಗಿ ಹೇಳಿದ್ದರು.‌ ಅದಕ್ಕೆ ಪುಷ್ಠಿ ನೀಡಿರುವಂತೆ ಈಗ ಶಾಸಕರಾದ ಗಣೇಶ ಹಾಗೂ ಆನಂದ್​ ಸಿಂಗ್ ಅವರ ಭೇಟಿ ಬಗ್ಗೆ ಸುದ್ದಿ ಹಬ್ಬಿದೆ.

For All Latest Updates

TAGGED:

ABOUT THE AUTHOR

...view details