ಕರ್ನಾಟಕ

karnataka

ತುಂಗಭದ್ರಾ ಡ್ಯಾಂನಿಂದ ನೀರಿನ ಸೋರಿಕೆ ತಡೆಯಲು 33 ಕ್ರಸ್ಟ್​​​​ ಗೇಟ್​​​​​​ಗಳಿಗೆ ರಬ್ಬರ್ ಸೀಲ್​

By

Published : Mar 24, 2021, 4:33 PM IST

2015-16ರಲ್ಲಿ ರಬ್ಬರ್ ಸೀಲ್ ಮಾಡಲಾಗಿತ್ತು‌.‌ ಗೇಟ್ ಮೂಲಕ ಈಗ ನೀರನ್ನು ಹರಿಬಿಡುತ್ತಿಲ್ಲ. ಹಾಗಾಗಿ ಬೇಸಿಗೆ ಸಂದರ್ಭದಲ್ಲಿ ಮಾಡಲಾಗುತ್ತಿದೆ. ಡ್ಯಾಂ ಸೇಫ್ಟಿ ರಿವೀವ್ ಪ್ಯಾನಲ್ ತಂಡ 5 ವರ್ಷಕ್ಕೊಮ್ಮೆ ಡ್ಯಾಂಗೆ ಭೇಟಿ ನೀಡಿ, ಪರಿಶೀಲನೆ ನಡೆಸಲಿದೆ.

Rubber seal work for 33 gates to prevent leakage of Tungabhadra Dam
ತುಂಗಭದ್ರಾ ಡ್ಯಾಂ ಸೋರಿಕೆ ತಡೆಯಲು 33 ಗೇಟ್​​​​​​ಗಳಿಗೆ ರಬ್ಬರ್ ಸೀಲ್ ವರ್ಕ್​​​

ಹೊಸಪೇಟೆ (ವಿಜಯನಗರ): ತುಂಗಭದ್ರಾ ಜಲಾಶಯದಲ್ಲಿ‌‌‌ ನೀರಿನ ಸೋರಿಕೆ ತಡೆಗಟ್ಟಲು 33 ಕ್ರಸ್ಟ್ ಗೇಟ್​​ಗಳಿಗೆ ರಬ್ಬರ್ ಸೀಲ್ ವರ್ಕ್ ಮಾಡಲಾಗುತ್ತಿದೆ. ಕ್ರಸ್ಟ್ ಗೇಟ್​​​​ನ ಸೈಡ್ ಮತ್ತು ಬಾಟಂನಲ್ಲಿ ರಬ್ಬರ್​​ ಸೀಲ್ ವರ್ಕ್ ಮಾಡಲಾಗುತ್ತಿದೆ. ರಬ್ಬರ್ ಅಳವಡಿಸುವುದರಿಂದ ಗೇಟ್​​​ಗೆ ಹೆಚ್ಚಿನ ಒತ್ತಡ ಆಗುವುದಿಲ್ಲ. ಅಲ್ಲದೇ ನೀರಿನ ಸೋರಿಕೆ ಕಡಿಮೆ ಮಾಡಬಹುದಾಗಿದೆ.‌

2015-16ರಲ್ಲಿ ರಬ್ಬರ್ ಸೀಲ್ ಮಾಡಲಾಗಿತ್ತು‌.‌ ಗೇಟ್ ಮೂಲಕ ಈಗ ನೀರನ್ನು ಹರಿಬಿಡುತ್ತಿಲ್ಲ. ಹಾಗಾಗಿ ಬೇಸಿಗೆ ಸಂದರ್ಭದಲ್ಲಿ ಮಾಡಲಾಗುತ್ತಿದೆ. ‘ಡ್ಯಾಂ ಸೇಫ್ಟಿ ರಿವೀವ್ ಪ್ಯಾನಲ್’ ತಂಡ 5 ವರ್ಷಕ್ಕೊಮ್ಮೆ ಡ್ಯಾಂಗೆ ಭೇಟಿ ನೀಡಿ, ಪರಿಶೀಲನೆ ನಡೆಸಲಿದೆ.

ತುಂಗಭದ್ರಾ ಡ್ಯಾಂನಿಂದ ನೀರಿನ ಸೋರಿಕೆ ತಡೆಯಲು 33 ಕ್ರಸ್ಟ್​​​​ ಗೇಟ್​​​​​​ಗಗಳಿಗೆರಬ್ಬರ್ ಸೀಲ್ ​​​

ಬಳಿಕ ಸುರಕ್ಷಾ ಕ್ರಮಗಳನ್ನು‌ ಅನುಸರಿಸಲು ಸೂಚನೆ ನೀಡಲಿದೆ.‌ ತುಂಗಭದ್ರಾ ಮಂಡಳಿಯ ಇಇ ಮಧುಸೂದನ್ ಮಾತನಾಡಿ, ಕಳೆದ ಒಂದು ತಿಂಗಳಿಂದ ರಬ್ಬರ್ ಸೀಲ್ ವರ್ಕ್ ಮಾಡಲಾಗುತ್ತಿದೆ. ಇದನ್ನು ಪ್ರತಿ 5 ವರ್ಷಕ್ಕೊಮ್ಮೆ ಮಾಡಲಾಗುತ್ತದೆ. ಜಲಾಶಯದ ಸುರಕ್ಷತೆ ಹಾಗೂ ನೀರಿನ ಸೋರಿಕೆ ತಡೆಗಟ್ಟಲು ರಬ್ಬರ್ ಸೀಲ್ ಸಹಾಯ ಮಾಡಲಿದೆ ಎಂದರು.

ಇದನ್ನೂ ಓದಿ:ಎಣ್ಣೆ ಪ್ರಿಯರಿಗೆ ಬಿಗ್‌ ಶಾಕ್.. ಈ ನಿಗದಿಗಿಂತ ಹೆಚ್ಚು 'ಲಿಕ್ಕರ್' ಖರೀದಿಸಿದ್ರೆ 3 ವರ್ಷ ಜೈಲು,10 ಪಟ್ಟು ದಂಡ

ABOUT THE AUTHOR

...view details