ಕರ್ನಾಟಕ

karnataka

ETV Bharat / state

ಆರ್​​ಟಿಐ ಕಾರ್ಯಕರ್ತನ ಕೊಲೆ ಪ್ರಕರಣ: ಶಾಸಕ ಪಿ.ಟಿ ಪರಮೇಶ್ವರ್ ನಾಯ್ಕ್ ಹೆಸರು ತಳಕು - ಆರ್​​ಟಿಐ ಕಾರ್ಯಕರ್ತನ ಕೊಲೆ ಪ್ರಕರಣ

ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ಪಟ್ಟಣದ ಆರ್​​ಟಿಐ ಕಾರ್ಯಕರ್ತರ ಶ್ರೀಧರ್ ಕೊಲೆ ಪ್ರಕರಣದಲ್ಲಿ ಹಾಲಿ ಶಾಸಕ ಪಿ.ಟಿ. ಪರಮೇಶ್ವರ್​ ನಾಯ್ಕ್​​ ಹೆಸರು ತಳಕು ಹಾಕಿಕೊಂಡಿದೆ.

RTI activist sridhar
ಆರ್​​ಟಿಐ ಕಾರ್ಯಕರ್ತರ ಶ್ರೀಧರ್

By

Published : Jul 16, 2021, 7:47 PM IST

ಹೊಸಪೇಟೆ/ವಿಜಯನಗರ:ಜಿಲ್ಲೆಯ ಹರಪ್ಪನಹಳ್ಳಿ ಪಟ್ಟಣದ ಮಾಹಿತಿ ಹಕ್ಕು ಕಾರ್ಯಕರ್ತ(ಆರ್‌ಟಿಐ) ಶ್ರೀಧರ್ ಕೊಲೆ ಪ್ರಕರಣದಲ್ಲಿ ಹಾಲಿ ಶಾಸಕ ಪಿ.ಟಿ. ಪರಮೇಶ್ವರ್​​ ನಾಯ್ಕ್​​ ಹೆಸರು ಕೇಳಿ ಬಂದಿದೆ.

ದೂರು ಪ್ರತಿ

ಗುರುವಾರ ಸಂಜೆ ಆರ್​​ಟಿಐ ಕಾರ್ಯಕರ್ತ ಶ್ರೀಧರ್ ಅವರನ್ನು ಕಬ್ಬಿಣ ರಾಡ್​​ಗಳಿಂದ ಹೊಡೆದು ಕೊಲೆ ಮಾಡಲಾಗಿತ್ತು.‌ ಶ್ರೀಧರ್ ಪತ್ನಿ ಶಿಲ್ಪಾ ಅವರು ಗುರುವಾರ ಮಧ್ಯರಾತ್ರಿ 12 ಗಂಟೆಗೆ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಕುರಿತು ಲಿಖಿತ ದೂರು ದಾಖಲಿಸಿದ್ದಾರೆ.

ದೂರು ಪ್ರತಿ

ಶಿಲ್ಪಾ ಅವರು ನೀಡಿದ ದೂರಿನ ಸಾರಾಂಶ:

ಜು.13 ರಂದು ಶ್ರೀಧರ್ ಅವರು ಜೀವ ಬೆದರಿಕೆ ಬಂದಿರುವ ಕುರಿತು ಮಾಹಿತಿ ನೀಡಿದ್ದರು. ಪಿ.ಟಿ.ಪರಮೇಶ್ವರ್​​ ನಾಯ್ಕ್​​ ಮಗ ಭರತ್ ಮೇಲೆ ನಾನು ಪ್ರಕರಣ ದಾಖಲಿಸಿದ್ದೆ. ಅಲ್ಲದೇ, ಹಾಲೇಶ್ ಎನ್ನುವರ ಮೇಲೆ ದೂರು ದಾಖಲಿಸಿದ್ದೇನೆ. ಹಾಗಾಗಿ‌‌ ನನಗೆ ಜೀವಭಯವಿದೆ ಎಂದು ಶ್ರೀಧರ್ ಅವರು ತಿಳಿಸಿದ್ದರು‌.

ಜು. 14 ರಂದು ಮನೆ ಬಿಟ್ಟು ಅವರು ಹೊರಗಡೆ ಬಂದಿರಲಿಲ್ಲ. ಜು.15 ರಂದು ಸಂಜೆ ಪತಿ ಶ್ರೀಧರ್ ಅವರನ್ನು ಕಬ್ಬಿಣದ ರಾಡ್​​ನಿಂದ ತಲೆಗೆ ಹೊಡೆದು ಬರ್ಬರವಾಗಿ ಕೊಲೆ‌ ಮಾಡಲಾಗಿದೆ. ದುರುದ್ದೇಶದಿಂದ ವಾಲ್ಮೀಕಿ ನಗರದ ಆರ್.ವಾಗೇಶ್ ಹಾಗು ನಾಲ್ಕು ಜನ ಸೇರಿ ಜನರು ಕೊಲೆ ಮಾಡಿದ್ದಾರೆ.‌ ನಮಗೆ ನ್ಯಾಯ ಕೊಡಿಸಬೇಕು ಎಂದು ಲಿಖಿತ ರೂಪದಲ್ಲಿ ಹರಪನಹಳ್ಳಿ ಪೊಲೀಸ್ ಠಾಣೆಗೆ ಶ್ರೀಧರ್ ಪತ್ನಿ ಶಿಲ್ಪಾ ದೂರು ಸಲ್ಲಿಸಿದ್ದಾರೆ.

ಇದನ್ನೂ ಓದಿ:ಹೊಸಪೇಟೆ: ಆರ್​ಟಿಐ ಕಾರ್ಯಕರ್ತನ ಬರ್ಬರ ಕೊಲೆ

ABOUT THE AUTHOR

...view details