ಹೊಸಪೇಟೆ: ಹಂಪಿಯ ಆರಾಧ್ಯದೈವ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ದೇವಾಲಯದ ಕಾಣಿಕೆ ಹುಂಡಿಗಳ ಎಣಿಕೆ ಕಾರ್ಯ ನಡೆದಿದ್ದು, 27.33 ಲಕ್ಷ ರೂ. ಸಂಗ್ರಹವಾಗಿದೆ.
ಹಂಪಿ ವಿರೂಪಾಕ್ಷೇಶ್ವರ ಹುಂಡಿ ಎಣಿಕೆ ಕಾರ್ಯ: 27.33 ಲಕ್ಷ ರೂ. ಸಂಗ್ರಹ - ವಿರೂಪಾಕ್ಷೇಶ್ವರ ಸ್ವಾಮಿ ದೇವಾಲಯ ಹುಂಡಿ ಎಣಿಕೆ
ಹಂಪಿಯ ಆರಾಧ್ಯದೈವ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ದೇವಾಲಯದ ಕಾಣಿಕೆ ಹುಂಡಿಗಳ ಎಣಿಕೆ ಕಾರ್ಯ ನಡೆದಿದೆ. 2019ರ ಆ. 2ರಂದು ದೇವಸ್ಥಾನದಲ್ಲಿ ಮೂರು ಹುಂಡಿಗಳನ್ನು ಅಳವಡಿಸಲಾಗಿತ್ತು.
![ಹಂಪಿ ವಿರೂಪಾಕ್ಷೇಶ್ವರ ಹುಂಡಿ ಎಣಿಕೆ ಕಾರ್ಯ: 27.33 ಲಕ್ಷ ರೂ. ಸಂಗ್ರಹ rs-27-dot-33-lakh-hundi-collection-in-hampi-temple](https://etvbharatimages.akamaized.net/etvbharat/prod-images/768-512-8558315-thumbnail-3x2-news.jpg)
ಹಂಪಿ ವಿರೂಪಾಕ್ಷೇಶ್ವರ ಹುಂಡಿ ಎಣಿಕೆ ಕಾರ್ಯ
2019ರ ಆ. 2ರಂದು ದೇವಸ್ಥಾನದಲ್ಲಿ ಮೂರು ಹುಂಡಿಗಳನ್ನು ಅಳವಡಿಸಲಾಗಿತ್ತು. ಈಗ ಎಣಿಕೆ ಮಾಡಿದಾಗ 27.33 ಲಕ್ಷ ರೂ. ಸಂಗ್ರಹವಾಗಿರುವುದು ಕಂಡುಬಂದಿದೆ.
ಹಂಪಿಯ ವಿದ್ಯಾರಣ್ಯ ಭಾರತಿ ಸ್ವಾಮೀಜಿ, ಹಿಂದೂ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ಎಂ.ಹೆಚ್. ಪ್ರಕಾಶ್ ರಾವ್, ಕೆನರಾ ಬ್ಯಾಂಕ್ ಹಂಪಿ ಶಾಖೆಯ ವ್ಯವಸ್ಥಾಪಕ ಶಿವಕುಮಾರ್ ರಾವ್, ಹೊಸಪೇಟೆ ಶಾಖೆಯ ವಿಜಯನಾರಾಯಣ, ಪೊಲೀಸ್ ಸಿಬ್ಬಂದಿ ಕೊಟ್ರೇಶ್ ಸಮ್ಮುಖದಲ್ಲಿ ಎಣಿಕೆ ಕಾರ್ಯ ನಡೆಯಿತು.