ಕರ್ನಾಟಕ

karnataka

By

Published : Jun 25, 2020, 4:02 PM IST

ETV Bharat / state

ಕೊರೊನಾ ಪತ್ತೆಗೆ ಆರ್​ಆರ್​ ಕಿಟ್​ಗಳನ್ನು ಖರೀದಿಸಲಾಗುವುದು : ಸಚಿವ ಆನಂದಸಿಂಗ್...

ಆರ್ ಆರ್ ಕಿಟ್ ಖರೀದಿಯ ಮುಖ್ಯ ಉದ್ದೇಶವೆಂದರೆ ಇದು ಹೊಸ ಮಾದರಿಯ ಕಿಟ್ ಆಗಿದ್ದು, ಅರ್ಧ ಗಂಟೆಯೊಳಗೆ ಮಹಾಮಾರಿ ಕೊರೊನಾ ವೈರಸ್​ನ್ನು ಪತ್ತೆಮಾಡಲಿದೆ ಎಂದು ಅರಣ್ಯ ಸಚಿವ ಆನಂದಸಿಂಗ್​​ ತಿಳಿಸಿದರು.

Minister Anandasingh
ಸಚಿವ ಆನಂದಸಿಂಗ್...

ಬಳ್ಳಾರಿ: ಮಹಾಮಾರಿ ಕೊರೊನಾ ವೈರಸ್ ತಡೆಗಟ್ಟುವ ಸಲುವಾಗಿ ಜಿಲ್ಲಾ ಖನಿಜ ನಿಧಿಯಿಂದ (ಡಿಎಂಎಫ್) ಸರಿ ಸುಮಾರು ನಾಲ್ಕು ಸಾವಿರ ಆರ್​​ಆರ್​​ ಕಿಟ್​ಗಳನ್ನು‌ ಖರೀದಿಸಲಾಗುವುದೆಂದು ಅರಣ್ಯ ಸಚಿವ ಆನಂದಸಿಂಗ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕೊರೊನಾ ಸೋಂಕು ಹರಡುವಿಕೆ ಮುನ್ನವೇ ಅದನ್ನ ಪತ್ತೆಹಚ್ಚುವ ಸಾಧನಾ ಇದಾಗಿದೆ. ಆರ್ ಆರ್ ಕಿಟ್ ಖರೀದಿಯ ಮುಖ್ಯ ಉದ್ದೇಶವೆಂದರೆ ಇದು ಹೊಸ ಮಾದರಿಯ ಕಿಟ್ ಆಗಿದ್ದು, ಅರ್ಧ ಗಂಟೆಯೊಳಗೆ ಮಹಾಮಾರಿ ಕೊರೊನಾ ವೈರಸ್​ನ್ನು ಪತ್ತೆಮಾಡಲಿದೆ ಎಂದರು. ಇದೇ ವೇಳೆ ಜಿಲ್ಲೆಯಲ್ಲೇ ಮೊದಲನೇ ಬಾರಿಗೆ ಈ‌ ಕಿಟ್ ಗಳನ್ನ ಖರೀದಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಸ್ಪಷ್ಟಪಡಿಸಿದ್ರು.

ಸಚಿವ ಆನಂದಸಿಂಗ್.
ಜಿಂದಾಲ್ ನಲ್ಲಿ ಶೇಕಡವಾರು ಸೋಂಕು ಪತ್ತೆ ಹೆಚ್ಚಿದೆ:ಜಿಲ್ಲೆಯ ಹೊರವಲಯದಲ್ಲಿ ಈ ಮಹಾಮಾರಿ ಕೊರೊನಾ ಸೋಂಕು ಶೇಕಡ 2ರಷ್ಟು ಪತ್ತೆಯಾಗಿದ್ದು, ಜಿಂದಾಲ್​ನಲ್ಲಿ ಶೇಕಡ 15 ರಷ್ಟು ಪತ್ತೆಯಾಗಿರೋದು ಖಾತ್ರಿಯಾಗಿದೆ. ಇದು ಅತ್ಯಂತ ಸೂಕ್ಷ್ಮವಾದ ವಿಚಾರವಾಗಿದೆ. ಹೀಗಾಗಿ, ಜಿಂದಾಲ್ ವಿಚಾರವಾಗಿ ಸ್ವಲ್ಪ ಆಲೋಚನೆ ಮಾಡಬೇಕಿದೆ ಎಂದು ಆತಂಕ ವ್ಯಕ್ತಪಡಿಸಿದರು.

ABOUT THE AUTHOR

...view details