ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯ ವಿರೂಪಾಕ್ಷೇಶ್ವರ ಬಜಾರ್ನ ಮಂಟಪವೊಂದರ ಛಾವಣಿ ಕುಸಿದಿದೆ. ಅದೃಷ್ಟವಾಶತ್ ಮಂಟಪದ ಪಕ್ಕದಲ್ಲಿದ್ದ ಪೊಲೀಸ್ ಠಾಣೆಗೆ ಯಾವುದೇ ಅಪಾಯ ಸಂಭವಿಸಿಲ್ಲ.
ಹಂಪಿಯಲ್ಲಿ ಮಂಟಪದ ಛಾವಣಿ ಕುಸಿತ: ಪೊಲೀಸ್ ಠಾಣೆಗೆ ಹಾನಿ - Hampi
ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ವಿಶ್ವವಿಖ್ಯಾತ ಹಂಪಿಯ ವಿರೂಪಾಕ್ಷೇಶ್ವರ ಬಜಾರ್ನ ಮಂಟಪವೊಂದರ ಛಾವಣಿ ಕುಸಿದಿದೆ.
ಹಂಪಿಯಲ್ಲಿ ಮಂಟಪದ ಚಾವಣಿ ಕುಸಿತ
ಮಂಟಪದ ಛಾವಣಿ ಕುಸಿದಿದ್ದರಿಂದ ಪ್ರವಾಸಿ ಪೊಲೀಸ್ ಠಾಣೆ ಹಾಗೂ ಅಕ್ಕಪಕ್ಕದ ಕೋಣೆಗಳು ಬಿರುಕು ಬಿಟ್ಟಿವೆ. ಸ್ಥಳಕ್ಕೆ ಪುರಾತತ್ವ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಇವುಗಳನ್ನು ರಥ ಬೀದಿ ಅಥವಾ ವಿರುಪಾಕ್ಷ ಬಜಾರ್ನಲ್ಲಿನ ಸಾಲು ಮಂಟಪಗಳು ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಈ ಮಂಟಪಗಳು ವಿಜಯನಗರದ ಕಾಲದ ಪ್ರಸಿದ್ಧಿಗೆ ಕಾರಣವಾದವು. ವಿಜಯನಗರದ ಕಾಲದಲ್ಲಿ ವ್ಯಾಪಾರ ವಹಿವಾಟಿಗಾಗಿ ಬಳಸಲಾಗುತ್ತಿತ್ತು ಎಂದು ಇತಿಹಾಸಕಾರರು ಹೇಳುತ್ತಾರೆ.