ಕರ್ನಾಟಕ

karnataka

ETV Bharat / state

ಬಳ್ಳಾರಿಯಲ್ಲಿ ಬೈಕ್‌ಗೆ ಅದಿರು ಲಾರಿ ಡಿಕ್ಕಿ: ಹಿಂಬದಿ ಕುಳಿತ ಮಹಿಳೆ ಸ್ಥಳದಲ್ಲೇ ಸಾವು - ರಸ್ತೆ ಅಪಘಾತ ಮಹಿಳೆ ಸಾವು

ದಂಪತಿ ತೋರಣಗಲ್ಲಿನಲ್ಲಿ ಕೆಲಸ ಮುಗಿಸಿಕೊಂಡು ವಾಪಸ್ ಮಲ್ಲಾಪುರ ಗ್ರಾಮಕ್ಕೆ ತೆರಳುತ್ತಿದ್ದರು. ಈ ಮಾರ್ಗಮಧ್ಯೆ ಹಿಂಬದಿಯಿಂದ ಬರುತ್ತಿದ್ದ ಅದಿರು ತುಂಬಿದ ಲಾರಿಯೊಂದು ಡಿಕ್ಕಿ ಹೊಡೆಯಿತು.

Road accident in bellary
ರಸ್ತೆ ಅಪಘಾತ

By

Published : Jul 6, 2021, 9:09 PM IST

ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ಬನ್ನಿಹಟ್ಟಿ ಗ್ರಾಮದ ಬಳಿ ಬೈಕ್‌ಗೆ ಅದಿರಿನ ಲಾರಿ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಕುಳಿತಿದ್ದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಸಂಡೂರು ತಾಲೂಕಿನ ಮಲ್ಲಾಪುರ ಗ್ರಾಮದ ಹನುಮಕ್ಕ (46) ಮೃತ ಮಹಿಳೆ. ಬೈಕ್ ಸವಾರ, ಪತಿ ಹನುಮಂತಪ್ಪ (55)ನಿಗೆ ಗಂಭೀರ ಗಾಯಗಳಾಗಿದ್ದು, ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಈ ದಂಪತಿ ತೋರಣಗಲ್ಲಿನ ಕೆಲಸ ಮುಗಿಸಿಕೊಂಡು ವಾಪಸ್ ಮಲ್ಲಾಪುರ ಗ್ರಾಮಕ್ಕೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಮಾರ್ಗಮಧ್ಯೆ ಹಿಂಬದಿಯಿಂದ ಬರುತ್ತಿದ್ದ ಅದಿರು ತುಂಬಿದ ಲಾರಿ ಡಿಕ್ಕಿ ಹೊಡೆದಿದೆ‌. ಘಟನೆ ನಡೆಯುತ್ತಿದ್ದಂತೆ ಲಾರಿ ಚಾಲಕ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ತೋರಣಗಲ್ಲಿನ ಪಿಎಸ್‌ಐ ಮಹೇಶಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗಾದಿಗನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಹಣ ವಸೂಲಿ ಆರೋಪ : ಪ್ರತಿಷ್ಠಿತ ಖಾಸಗಿ ಆಸ್ಪತ್ರೆ ವಿರುದ್ಧ ವೃದ್ಧನಿಂದ ದೂರು

ABOUT THE AUTHOR

...view details