ಬಳ್ಳಾರಿ: ಬಳ್ಳಾರಿ ತಾಲೂಕಿನ ಮೋಕಾ ಎಲ್ಎಲ್ಸಿ ಕಾಲುವೆ ಬಳಿ ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಟಾಟಾ ಏಸ್- ಬೈಕ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಟಾಟಾ ಏಸ್- ಬೈಕ್ ಡಿಕ್ಕಿ : ದ್ವಿಚಕ್ರ ವಾಹನ ಸವಾರ ಸಾವು
ಬಳ್ಳಾರಿ ತಾಲೂಕಿನ ಮೋಕಾ ಎಲ್ಎಲ್ಸಿ ಕಾಲುವೆ ಬಳಿ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಅಪಘಾತ
ಬಳ್ಳಾರಿ ತಾಲೂಕಿನ ಕೊಳಗಲ್ಲು ಗ್ರಾಮದ ನಿವಾಸಿಗಳಾದ ಚಂದ್ರಪ್ಪ (59) ಸ್ಥಳದಲ್ಲೇ ಮೃತಪಟ್ಟಿದ್ದು, ಹಿಂಬದಿಯ ಸವಾರ ವೀರೇಶ (66) ಗಂಭೀರವಾಗಿ ಗಾಯಗೊಂಡಿದ್ದಾರೆ.
ನೆರೆಯ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಆದೋನಿ ತಾಲೂಕಿನ ಕೌತಾಳಂ ಮಂಡಲದ ಉರುಕುಂದಿ ಈರಣ್ಣನ ದರ್ಶನ ಪಡೆದು ವಾಪಸ್ ಬಳ್ಳಾರಿಗೆ ಬರುವ ಮಾರ್ಗದಲ್ಲೇ ಮೋಕಾ ಎಲ್ಎಲ್ಸಿ ಕಾಲುವೆಯ ಬಳಿ ಈ ಭೀಕರ ಅಪಘಾತ ಸಂಭವಿಸಿದೆ. ಈ ಕುರಿತು ಮೋಕಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.