ಬಳ್ಳಾರಿ: ಈ ದೇಶದ ಖ್ಯಾತ ಗಾಯಕ ಎಸ್.ಪಿ ಬಾಲ ಸುಬ್ರಹ್ಮಣ್ಯಂ ಅವರಿಗೆ ಪ್ರಧಾನಿ ಭದ್ರತಾ ಸಿಬ್ಬಂದಿ ಅವಮಾನ ಮಾಡಿರೋದು ಸರಿಯಾದ ಕ್ರಮವಲ್ಲ ಎಂದು ಲೋಕಾಯುಕ್ತ ನಿವೃತ್ತ ನ್ಯಾ. ಸಂತೋಷ ಹೆಗ್ಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಭದ್ರತಾ ಸಿಬ್ಬಂದಿ ಮೇಲೆ ಎಸ್ಪಿಬಿ ಅಸಮಾಧಾನ: ಗಾಯಕನ ಬೆಂಬಲಕ್ಕೆ ನಿಂತ ಸಂತೋಷ ಹೆಗ್ಡೆ - ಎಸ್ಪಿಬಿ ಅಸಮಾಧಾನಕ್ಕೆ ಸಂತೋಷ ಹೆಗ್ಡೆ ಬೆಂಬಲ
ಖ್ಯಾತ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರ ಮೊಬೈಲ್ ಅನ್ನು ಪ್ರಧಾನಿಯವರ ಭದ್ರತಾ ಸಿಬ್ಬಂದಿ ಕಸಿದು ಬದಿಗಿರಿಸಿ ಅವಮಾನ ಮಾಡಿರುವುದು ಸರಿಯಲ್ಲ ಎಂದು ನಿವೃತ್ತ ನ್ಯಾ. ಸಂತೋಷ ಹೆಗ್ಡೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಗಾಂಧೀಜಿಯವರ 150ನೇ ಜನ್ಮದಿನದ ನಿಮಿತ್ತ ಸ್ವತಃ ಪ್ರಧಾನಿಯವರೇ ದೇಶದ ಖ್ಯಾತ ಗಾಯಕರು ಹಾಗೂ ಖ್ಯಾತ ನಟರನ್ನ ಆಹ್ವಾನಿಸಿದ್ರು. ಆದ್ರೆ, ಖ್ಯಾತ ಗಾಯಕ ಎಸ್.ಪಿ ಬಾಲ ಸುಬ್ರಹ್ಮಣ್ಯಂ ಅವರ ಮೊಬೈಲ್ ಅನ್ನು ಭದ್ರತಾ ಸಿಬ್ಬಂದಿ ಕಸಿದು ಬದಿಗಿರಿಸಿ ಅವಮಾನ ಮಾಡಿದ್ದಾರೆಂದು ಆರೋಪಿಸಿದ್ದರು. ಪ್ರಧಾನಿಯವರ ಭದ್ರತಾ ಸಿಬ್ಬಂದಿ ನಡೆಸಿಕೊಂಡ ರೀತಿ ಸರಿಯಾದುದಲ್ಲ ಎಂದು ಹೆಗ್ಡೆ ಹೇಳಿದ್ದಾರೆ.
ಸಾಂವಿಧಾನಿಕವಾಗಿ ಚೌಕಟ್ಟಿನಲ್ಲಿ ಈ ಭದ್ರತೆ ಬರೋದಿಲ್ಲ. ಪ್ರಧಾನಿ ಕಚೇರಿಗೆ ಯಾರಾದರೂ ಹೋಗಬಹುದು, ಅಲ್ಲಿ ಮುಕ್ತ ಪ್ರವೇಶಕ್ಕೆ ಅವಕಾಶ ಇದೆ. ಆದರೆ, ಅವರ ಭದ್ರತ ಸಿಬ್ಬಂದಿ ಯಾರೇ ಬಂದರೂ ಉತ್ತಮ ರೀತಿಯಾಗಿ ವರ್ತಿಸಬೇಕು. ಈ ರೀತಿಯಾದ ವರ್ತನೆ ಸರಿಯಲ್ಲ ಎಂದು ಖಂಡಿಸಿದ್ದಾರೆ.