ಕರ್ನಾಟಕ

karnataka

ETV Bharat / state

ಸಿಎಎ ಕಾಯ್ದೆ ಚೌಕಿದಾರನ ದಡ್ಡತನದ ಪರಮಾವಧಿ ... ಶಶಿಕಾಂತ್ ಸೆಂಥಿಲ್ ವ್ಯಂಗ್ಯ - ನಿವೃತ್ತ ಐಎಎಸ್ ಅಧಿಕಾರಿ ಶಶಿಕಾಂತ್ ಸೆಂಥಿಲ್

ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ), ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್​ಪಿಆರ್) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಸಿಆರ್) ಜಾರಿಗೆ ತಂದಿರೋದು ಚೌಕಿದಾರನ ದಡ್ಡತನದ ಪರಮಾವಧಿ ಎಂದು ಮಾಜಿ ಐಎಎಸ್ ಅಧಿಕಾರಿ ಶಶಿಕಾಂತ್ ಸೆಂಥಿಲ್ ವ್ಯಂಗ್ಯವಾಡಿದ್ದಾರೆ.

Shashikant Senthil
ಬಳ್ಳಾರಿಯಲ್ಲಿ ಜನತೆಯ ಸಮಾವೇಶ

By

Published : Jan 18, 2020, 12:25 PM IST

Updated : Jan 18, 2020, 2:13 PM IST

ಬಳ್ಳಾರಿ:ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ), ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್​ಪಿಆರ್) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಸಿಆರ್) ಜಾರಿಗೆ ತಂದಿರೋದು ಚೌಕಿದಾರನ ದಡ್ಡತನದ ಪರಮಾವಧಿ ಎಂದು ಮಾಜಿ ಐಎಎಸ್ ಅಧಿಕಾರಿ ಶಶಿಕಾಂತ್ ಸೆಂಥಿಲ್ ವ್ಯಂಗ್ಯವಾಡಿದ್ದಾರೆ.

ರಾಜೀನಾಮೆ ನೀಡಿದ ಐಎಎಸ್ ಅಧಿಕಾರಿ ಶಶಿಕಾಂತ್ ಸೆಂಥಿಲ್

ಬಳ್ಳಾರಿಯ ಬಿಡಿಎಎ ಫುಟ್ಬಾಲ್ ಮೈದಾನದ ಸಭಾಂಗಣದಲ್ಲಿ ಕನ್ಸರ್ನ್ಡ್ ಸಿಟಿಜನ್ಸ್ ಆಫ್ ಇಂಡಿಯಾ (ಸಿಸಿಐ) ವತಿಯಿಂದ ಏರ್ಪಡಿಸಿದ್ದ ಜನತೆಯ ಸಮಾವೇಶದಲ್ಲಿ ಮಾತನಾಡಿದ ಅವರು, ನಾವೆಲ್ಲ ಮತ ಚಲಾಯಿಸಿ ನರೇಂದ್ರ ಮೋದಿಯವರನ್ನು 2014 ರಲ್ಲಿ ಪ್ರಧಾನಿಯನ್ನಾಗಿ ಮಾಡಿದ್ದೀವಿ. ಆದ್ರೆ, ಅವರು ನಮ್ಮ ಜೇಬಿಗೆ ಕೈ ಹಾಕಿದ್ರು. ಅಲ್ಪಸ್ವಲ್ಪ ಕೂಡಿಟ್ಟ ಹಣವನ್ನೇ ಕಸಿದು ಕೊಂಡ್ರು. 2019 ರಲ್ಲೂ ಕೂಡ ಆ ಚೌಕಿದಾರನನ್ನ ಮತ್ತೊಮ್ಮೆ ಪ್ರಧಾನಿಯಾಗಿ ಮಾಡಿದ್ದೀವಿ. ಆದರೀಗ, ಅವರು ನೀವೆಲ್ಲ ಯಾರು? ನೀವೆಲ್ಲಾ ಭಾರತೀಯರೇ ಅಂತ ಕೇಳುತ್ತಿದ್ದಾರೆ. ಅದನ್ನ ಸಾಬೀತುಪಡಿಸಿ ಅಂತೆಲ್ಲಾ ಕೇಳುತ್ತಿದ್ದಾರೆ.‌ ಈ ನೆಲದಲಿ ಹುಟ್ಟಿದವರೆಲ್ಲರೂ ಭಾರತೀಯರೇ ಅಂತ ಸಂವಿಧಾನವೇ ಹೇಳುತ್ತೆ. ಆದರೆ ಪ್ರಧಾನಿ ಮೋದಿ ಮಾತ್ರ ಸಿಎಎ, ಎನ್ ಪಿಆರ್ ಹಾಗೂ ಎನ್ ಸಿಆರ್ ಮೂಲಕ ನೀವೆಲ್ಲಾ ಯಾರೂ ಎಂಬ ಪ್ರಶ್ನೆಯೊಂದನ್ನ ಎತ್ತಿದ್ದಾರೆ ಎಂದರು.

ನಾವೆಲ್ಲ ನಮ್ಮ ಮತ ಚಲಾಯಿಸಿ ಎರಡು ಅವಧಿಗೆ ನಿಮ್ಮ ಪ್ರಧಾನಿಯನ್ನಾಗಿಸಿದ್ದೇವೆ. ನಾವೆಲ್ಲ ಯಾರು ಅಂತ ಕೇಳುವ ನಿಮಗೆ ನಾವೆಲ್ಲ ಕೇಳುತ್ತೇವೆ. ನೀವು ಯಾರು? ಎಂದು ವ್ಯಂಗ್ಯವಾಡಿದರು. ಈ ದೇಶ ಬಹಳ‌ ಸಂದಿಗ್ಧ ಪರಿಸ್ಥಿತಿಯತ್ತ ಸಾಗುತ್ತಿದೆ. ನಾನು ಐಎಎಸ್ ಪೂರೈಸಿ ದೇಶ ಸೇವೆ ಮಾಡಲು ಉನ್ನತ ಹುದ್ದೆಯನ್ನು ಅಲಂಕರಿಸಿದೆ. ಆದರೆ, ಇಡೀ ದೇಶವೇ ಅಧೋಗತಿಯತ್ತ ಸಾಗುತ್ತಿರುವಾಗ ನಾವ್ ಮಾತ್ರ ಆ ಹುದ್ದೆಯಲ್ಲಿ ಕುಳಿತುಕೊಂಡು ಏನು ಸೇವೆ ಮಾಡಲಾಗದು ಅಂತ ಯೋಚಿಸಿ ನನ್ನ ಹುದ್ದೆಗೆ ರಾಜೀನಾಮೆ ನೀಡಿರುವೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಕಾಯಿದೆಗಳ ವಿರುದ್ಧ ದೇಶವ್ಯಾಪಿ ವ್ಯಾಪಾಕ ವಿರೋಧ ವ್ಯಕ್ತವಾಗಿದ್ದು, ದೇಶ- ದೇಶ ಎಂದು ಢೋಂಗಿತನದ ಜಂಬ ಕೊಚ್ಚಿಕೊಳ್ಳುತ್ತಿದ್ದವರಿಗೆ ಈಗ ನಿಜವಾದ ದೇಶದ ಪರಿಚಯ ಆಗಿದೆ. ಸಂಘಟನೆ, ಹೋರಾಟ ಮತ್ತು ಅಹಿಂಸಾ‌ ಮಾರ್ಗದತ್ತ ನಾವೆಲ್ಲರೂ ಸಾಗಬೇಕಿದೆ. ಮಂಗಳೂರು ಗೋಲಿಬಾರ್ ಘಟನೆ ಬಿಟ್ಟರೆ ಬೇರೆ ಯಾವ ಅವಘಡಗಳು ಸಂಭವಿಸಿಲ್ಲ. ನಮ್ಮನ್ನು ಕೆರಳಿಸುವ ಸನ್ನಿವೇಶವನ್ನು ಆಳ್ವಿಕೆ ಸರ್ಕಾರಗಳು ಸೃಷ್ಠಿ‌ ಮಾಡುತ್ತಿವೆ. ಅದಕ್ಕೆ ನಾವ್ಯಾರು ಧೃತಿಗೆಡಬಾರದು ಎಂದರು.

ನಮ್ಮ‌ ಹೋರಾಟದ ಬಿಸಿ ಢೋಂಗಿತನದ ದೇಶಭಕ್ತರಿಗೆ ಮುಟ್ಟಿದೆ. ಅವರಲ್ಲಿ ನಡುಕ ಶುರುವಾಗಿದೆ. ಸುಪ್ರೀಂಕೋರ್ಟ್ ಈ ಕಾಯಿದೆಗಳ ಜಾರಿಗೆ ಅಸಮಾಧಾನ ವ್ಯಕ್ತಪಡಿಸಿದೆ. ಇದಕ್ಕೆಲ್ಲಾ ಕಾರಣ ನಮ್ಮ ಶಾಂತಿಯುತ ಹೋರಾಟ. ನಾವೆಲ್ಲ ಜೈಲ್ ಭರೋ ಚಳವಳಿ ಕುರಿತು ಇತಿಹಾಸದ ಪುಟಗಳಲ್ಲಿ ಓದಿ‌ ತಿಳಿದುಕೊಂಡಿದ್ದೇವೆ. ಈಗ ನಾವೆಲ್ಲರೂ ಜೈಲ್ ಭರೋ ಚಳವಳಿಯಲ್ಲಿ ಭಾಗಿಯಾಗುವ ಸುವರ್ಣ ಅವಕಾಶ ಒದಗಿ ಬರುವ ಕಾಲ ಸನ್ನಿಹಿತವಾಗಿದೆ. ನಾವೆಲ್ಲ ಗೆದ್ದಿದ್ದೇವೆ.‌ ಇನ್ನೇನೂ ಸಂವಿಧಾನಾತ್ಮಕ ತೀರ್ಪು ಮಾತ್ರ ಬರಬೇಕಿದೆ ಎಂದರು.

Last Updated : Jan 18, 2020, 2:13 PM IST

ABOUT THE AUTHOR

...view details