ಕರ್ನಾಟಕ

karnataka

ETV Bharat / state

ಪಕ್ಷಿಗಳ ದಾಹ ತಣಿಸಲು ಮುಂದಾದ ಹಂಪಿ ಸಂಶೋಧನಾ ವಿದ್ಯಾರ್ಥಿಗಳು! - ಸಂಶೋಧನಾ ವಿದ್ಯಾರ್ಥಿ

ಪ್ರಾಣಿ ಪಕ್ಷಿಗಳಿಗೆ ಬೇಸಿಗೆ ಸಮಯದಲ್ಲಿ ನೀರು ದೊರೆಯುವುದು ವಿರಳ. ಅದಕ್ಕಾಗಿ ಪಕ್ಷಿಗಳಿಗೆ ನೀರಿಡುವ ಸಣ್ಣ ಪ್ರಯತ್ನ ಮಾಡಿದ್ದೇವೆ ಎಂದು ಸಂಶೋಧನಾ ವಿದ್ಯಾರ್ಥಿಗಳಾದ ಬಸವರಾಜ್ ಮತ್ತು ಸುಭಾಷ್ ಈಟಿವಿ ಭಾರತ್​ಗೆ ತಿಳಿಸಿದರು.

ಪಕ್ಷಿಗಳಿಗೆ ನೀರು ಇಡುವ ಸಣ್ಣ ಪ್ರಯತ್ನ

By

Published : Apr 5, 2019, 4:10 AM IST

ಬಳ್ಳಾರಿ: ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳು ಕೋರ್ಸ್​ವರ್ಕ್ ಅಂತಿಮ ದಿನದಂದು ಸ್ವಯಂ ಹಣ ಖರ್ಚು ಮಾಡಿ ಪಕ್ಷಿಗಳ ದಾಹ ತಣಿಸುವ ಪ್ರಯತ್ನ ಮಾಡಿದರು. ಹೌದು, ಮಡಿಕೆಯ ಬಟ್ಟಲಿನಲ್ಲಿ ನೀರು ಹಾಕಿ ಗಿಡಗಳಿಗೆ ನೇತು ಹಾಕುವ ಮೂಲಕ ಹಕ್ಕಿಗಳಿಗೆ ನೀರುಣಿಸುವ ಕಾರ್ಯ ಮಾಡಿದರು .

ಗಣಿನಾಡು ಬಳ್ಳಾರಿಯಲ್ಲಿ ಬಿಸಿಲು ಮತ್ತು ಅತಿಬಿಸಿಲು ಎನ್ನುವ ಎರಡು ಕಾಲಗಳಿವೆ. ಪ್ರಾಣಿ ಪಕ್ಷಿಗಳಿಗೆ ಈ ಸಮಯದಲ್ಲಿ ನೀರು ದೊರೆಯುವುದು ಬಹಳ ವಿರಳ. ಅದಕ್ಕಾಗಿ ಪಕ್ಷಿಗಳಿಗೆ ನೀರಿಡುವ ಸಣ್ಣ ಪ್ರಯತ್ನ ಮಾಡಿದ್ದೇವೆ ಎಂದು ಸಂಶೋಧನಾ ವಿದ್ಯಾರ್ಥಿಗಳಾದ ಬಸವರಾಜ್ ಮತ್ತು ಸುಭಾಷ್ ಈಟಿವಿ ಭಾರತ್​ಗೆ ತಿಳಿಸಿದರು.

ಪಕ್ಷಿಗಳಿಗೆ ನೀರಿಡುವ ಸಣ್ಣ ಪ್ರಯತ್ನ

ಸಂಶೋಧನಾ ವಿದ್ಯಾರ್ಥಿಗಳಾದ ಸಿಂಧನೂರಿನ ಬಸವರಾಜ್ ಮತ್ತು ಕೂಡ್ಲಿಗಿಯ ಸುಭಾಷ್ ಚಂದ್ರ ಬೋಸ್ ಅವರ ನೇತೃತ್ವದಲ್ಲಿ ಸಂಶೋಧನಾ ವಿದ್ಯಾರ್ಥಿಗಳು ಪಕ್ಷಿಗಳಿಗೆ ನೀರುಣಿಸುವ ಪ್ರಯತ್ನ ಮಾಡಿದರು. ಬೇಸಿಗೆಯಲ್ಲಿ ಪ್ರತಿನಿತ್ಯ ಸಂಶೋಧನಾ ವಿದ್ಯಾರ್ಥಿಗಳು ಈ ಮಡಿಕೆಯ ಬಟ್ಟಲುಗಳಿಗೆ ನೀರು ಹಾಕುತ್ತಾರೆ.

ABOUT THE AUTHOR

...view details