ಕರ್ನಾಟಕ

karnataka

ETV Bharat / state

ತಬ್ಲಿಘಿ ಸಭೆಯಲ್ಲಿ ಭಾಗಿಯಾದವರು ವರದಿ‌ ಮಾಡಿಕೊಳ್ಳಲು ಜಿಲ್ಲಾಧಿಕಾರಿ ಸೂಚನೆ - DC SS Nakul Latest News

ದೆಹಲಿಯಲ್ಲಿ ನಡೆದಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸರ್ಕಾರಿ ನೌಕರರು, ಖಾಸಗಿ ಸಂಸ್ಥೆಯ ನೌಕರರು ಹಾಗೂ ಇತರೆ ಸಾರ್ವಜನಿಕರು ತುರ್ತಾಗಿ ಜಿಲ್ಲಾ ಕಂಟ್ರೋಲ್ ರೂಂಗೆ ಕರೆ ಮಾಡಿ ವರದಿ ಮಾಡಿಕೊಳ್ಳಲು ಜಿಲ್ಲಾಧಿಕಾರಿ ‌ಎಸ್.ಎಸ್.ನಕುಲ್ ತಿಳಿಸಿದ್ದಾರೆ.

DC. S.S. Nakul notice
ಜಿಲ್ಲಾಧಿಕಾರಿ ‌ಎಸ್.ಎಸ್.ನಕುಲ್

By

Published : Apr 6, 2020, 8:55 PM IST

ಬಳ್ಳಾರಿ: ದೆಹಲಿಯಲ್ಲಿ ನಡೆದಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸರ್ಕಾರಿ ನೌಕರರು, ಖಾಸಗಿ ಸಂಸ್ಥೆಯ ನೌಕರರು ಹಾಗೂ ಇತರೆ ಸಾರ್ವಜನಿಕರು ತುರ್ತಾಗಿ ಜಿಲ್ಲಾ ಕಂಟ್ರೋಲ್ ರೂಂ ಸಂಖ್ಯೆ 08392277100 ಹಾಗೂ 8277888866ಕ್ಕೆ ಕರೆ ಮಾಡಿ ವರದಿ ಮಾಡಿಕೊಳ್ಳಲು ತಿಳಿಸಲಾಗಿದೆ ಎಂದು‌ ಜಿಲ್ಲಾಧಿಕಾರಿ ‌ಎಸ್.ಎಸ್.ನಕುಲ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ‌ಎಸ್.ಎಸ್.ನಕುಲ್ ಸೂಚನೆ


ನಾಳೆ ಸಂಜೆ 6 ಗಂಟೆ ಒಳಗಾಗಿ ವರದಿ ಮಾಡಿಕೊಳ್ಳಲು ತಿಳಿಸಿದ್ದು, ನಿಗದಿತ ಅವಧಿಯೊಳಗೆ ವರದಿ ಮಾಡಿಕೊಳ್ಳದೇ ಇರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details