ಕರ್ನಾಟಕ

karnataka

ETV Bharat / state

ಸೇವೆಯಿಂದ ಬಿಡುಗಡೆಗೊಳಿಸುವ ಆದೇಶ: ಆತಂಕದಲ್ಲಿ ವಿಮ್ಸ್ ಆಸ್ಪತ್ರೆಯ ಗುತ್ತಿಗೆ ಆಧಾರಿತ ಲ್ಯಾಬ್ ಟೆಕ್ನಿಷಿಯನ್​ಗಳು - ಕೆಲಸ ಕಳೆದುಕೊಳ್ಳುವ ಆತಂಕದಲ್ಲಿ ವಿಮ್ಸ್ ಆಸ್ಪತ್ರೆಯ ಗುತ್ತಿಗೆ ಆಧಾರಿತ ಲ್ಯಾಬ್ ಟೆಕ್ನಿಷಿಯನ್​ಗಳು

ನೂರಾರು ಮಂದಿ ಲ್ಯಾಬ್ ಟೆಕ್ನಿಷಿಯನ್​ಗಳನ್ನು ಮುಂದಿನ ಏಪ್ರಿಲ್ ತಿಂಗಳಲ್ಲಿ ಸೇವೆಯಿಂದ ಕೈ ಬಿಡುವ ನಿರ್ಧಾರವನ್ನು ವಿಮ್ಸ್ ಆಡಳಿತ ಮಂಡಳಿ ಮಾಡಿದ್ದು, ಈ ಕುರಿತು ವಿಮ್ಸ್ ನಿರ್ದೇಶಕರ ಕಚೇರಿ ಆದೇಶ ಹೊರಡಿಸಿದೆ. ಇದರಿಂದ ಗುತ್ತಿಗೆ ಆಧಾರಿತ ನೌಕರರು ಆತಂಕದಲ್ಲಿದ್ದಾರೆ.

ವಿಮ್ಸ್ ಆಡಳಿತ ಮಂಡಳಿ ವಿರುದ್ಧ ಲ್ಯಾಬ್ ಟೆಕ್ನಿಷಿಯನ್​ಗಳು ಆಕ್ರೋಶ
ವಿಮ್ಸ್ ಆಡಳಿತ ಮಂಡಳಿ ವಿರುದ್ಧ ಲ್ಯಾಬ್ ಟೆಕ್ನಿಷಿಯನ್​ಗಳು ಆಕ್ರೋಶ

By

Published : Jan 27, 2021, 5:55 PM IST

ಬಳ್ಳಾರಿ: ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಅಧೀನದ ಆಸ್ಪತ್ರೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಲ್ಯಾಬ್ ಟೆಕ್ನಿಷಿಯನ್​ಗಳಾಗಿ ಕೆಲಸ ಮಾಡುತ್ತಿದ್ದವರ ಮೇಲೆ ಕೋವಿಡ್ ಕರಿನೆರಳು ಬಿದ್ದಿದೆ.

ವಿಮ್ಸ್ ಆಡಳಿತ ಮಂಡಳಿ ವಿರುದ್ಧ ಲ್ಯಾಬ್ ಟೆಕ್ನಿಷಿಯನ್​ಗಳು ಆಕ್ರೋಶ

ಹೌದು, ನೂರಾರು ಮಂದಿ ಲ್ಯಾಬ್ ಟೆಕ್ನಿಷಿಯನ್​ಗಳನ್ನು ಮುಂದಿನ ಏಪ್ರಿಲ್ ತಿಂಗಳಲ್ಲಿ ಸೇವೆಯಿಂದ ಕೈ ಬಿಡುವ ನಿರ್ಧಾರವನ್ನು ವಿಮ್ಸ್ ಆಡಳಿತ ಮಂಡಳಿ ಮಾಡಿದೆ. ಈಗಾಗಲೇ ಕಡಿಮೆ ವೇತನ ಪಡೆದು ಕರ್ತವ್ಯ ನಿರ್ವಹಿಸುತ್ತಿರುವ ಲ್ಯಾಬ್ ಟೆಕ್ನಿಷಿಯನ್​ಗಳನ್ನು ಅವಧಿ ಮುಗಿದ ಬಳಿಕ ಸೇವೆಯಿಂದ ಬಿಡುಗಡೆಗೊಳಿಸುವ ಆದೇಶವನ್ನು ವಿಮ್ಸ್ ನಿರ್ದೇಶಕರ ಕಚೇರಿ ಹೊರಡಿಸಿದೆ.

ಕೋವಿಡ್-19 ಸೋಂಕು ದಟ್ಟವಾಗಿ ಹರಡುತ್ತಿದ್ದ ಕಾಲದಲ್ಲಿ ವಿಮ್ಸ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗುತ್ತಿಗೆ ಆಧಾರದ ಲ್ಯಾಬ್ ಟೆಕ್ನಿಷಿಯನ್​ಗಳನ್ನು ಮುಂದಿನ 6 ತಿಂಗಳ ಅವಧಿಗೆ ಸೇವೆ ಮುಂದುವರೆಸಿ ಆದೇಶ ಹೊರಡಿಸಿದ್ದ ವಿಮ್ಸ್​ನ ಆಡಳಿತ ಮಂಡಳಿಯು, ಇದೀಗ ಲ್ಯಾಬ್ ಟೆಕ್ನಿಷಿಯನ್​ಗಳ ಸೇವೆ ಅಗತ್ಯವಿಲ್ಲ ಎಂದಿರುವುದು ನೌಕರರನ್ನು ಚಿಂತೆಗೀಡು ಮಾಡಿದೆ.

ತಮಗೆ ಅಗತ್ಯವಿದ್ದಾಗ ಸೇವೆಯನ್ನು ಮುಂದುವರಿಸಿ, ಇದೀಗ ಅಗತ್ಯವಿಲ್ಲದ ಸಬೂಬು ನೀಡಿ ಹೊರ ದೂಡುವುದು ತರವಲ್ಲ. ಕೋವಿಡ್-19 ಸೋಂಕು ವ್ಯಾಪಕವಾಗಿ ಹರಡುವ ಸಂದರ್ಭದಲ್ಲಿ ಹಗಲು-ರಾತ್ರಿ ಎನ್ನದೇ ನಮ್ಮ ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ್ದೇವೆ. ಆದರೀಗ ಕಡಿಮೆ ವೇತನ ನೀಡುವುದಲ್ಲದೇ, ಸೇವೆಯಿಂದ ಬಿಡುಗಡೆ ಮಾಡುತ್ತಿರುವುದು ಬೇಸರ ಉಂಟುಮಾಡಿದೆ ಎಂದು ಲ್ಯಾಬ್ ಟೆಕ್ನಿಷಿಯನ್​ಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಲ್ಯಾಬ್ ಟೆಕ್ನಿಷಿಯನ್ ನೌಕರಿಯಿಂದಲೇ ನಮ್ಮ ಜೀವನ ನಿರ್ವಹಣೆ ಆಗುತ್ತಿತ್ತು.‌ ಆದರೆ ಈಗ ಎಕಾಏಕಿ ಸೇವೆಯಿಂದ ತೆಗೆದುಹಾಕುವ ವಿಮ್ಸ್ ಆದೇಶವು ಬಹಳ ನೋವು ತಂದಿದೆ. ಲ್ಯಾಬ್ ಟೆಕ್ನಿಷಿಯನ್ ಕುಟುಂಬಗಳು ವಿಷ ಸೇವಿಸಿ ಸಾವಿಗೆ ಶರಣಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಲ್ಯಾಬ್ ಟೆಕ್ನಿಷಿಯನ್ ಬಿ.ಎಂ. ಎರ್ರಿಸ್ವಾಮಿ ಅಳಲನ್ನು ತೋಡಿಕೊಂಡಿದ್ದಾರೆ.

ABOUT THE AUTHOR

...view details