ಬಳ್ಳಾರಿ: ಗಣಿ ಜಿಲ್ಲೆಯ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಎಲ್ ಎಲ್ ಸಿ ಉಪಕಾಲುವೆಗೆ ಶನಿವಾರ ಸಂಜೆ ನೂರು ಕ್ಯೂಸೆಕ್ ನೀರನ್ನ ಹರಿಬಿಡಲಾಯಿತು.
ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ ಜಿ.ನಾಗಮೋಹನ ಅವರು ಜಲಾಶಯದ ಹೊರ ಹರಿವಿಗೆ ಚಾಲನೆ ನೀಡಿದರು. ಮೊದಲ ಹಂತದಲ್ಲಿ 100 ಕ್ಯೂಸೆಕ್ ನೀರನ್ನ ಹರಿಬಿಡಲಾಗಿದೆ. ಎರಡನೇಯ ಹಂತದಲ್ಲಿ ಅಂದಾಜು 600 ಕ್ಯೂಸೆಕ್ ನೀರನ್ನ ಹರಿಬಿಡಲು ನಿರ್ಧರಿಸಲಾಗಿದೆ. ಹೀಗೆ ಹಂತಹಂತವಾಗಿ ಉಪ ಕಾಲುವೆಗೆ ನೀರು ಹರಿಸಲಾಗುವುದು. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು ನಾಗಮೋಹನ್ ತಿಳಿಸಿದರು. ತುಂಗಭದ್ರಾ ಮಂಡಳಿಯ ಸೂಪರಿಂಡೆಂಟ್ ಇಂಜಿನಿಯರ್ ಕೆ.ವಿ. ರಮಣ ಇದ್ದರು.