ಬಳ್ಳಾರಿ: ಸಾರಿಗೆ ಇಲಾಖೆಯಲ್ಲಿ ಚಾಲಕರ ಕೊರತೆ ಹಿನ್ನೆಲೆ ನಿವೃತ್ತಿ ಆಗಿರುವ ಚಾಲಕರನ್ನ ಹೊರಗುತ್ತಿಗೆ ಮೂಲಕ ಫಿಜಿಕಲ್ ಫಿಟ್ನೆಸ್ ಇರುವವರನ್ನ ಪುನ: ನೇಮಕ ಮಾಡಲಾಗುವುದೆಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚಾಲಕರ ಕೊರತೆ ಇದೆ. 2006-07 ರಲ್ಲಿ ನಿವೃತ್ತಿ ಆಗಿರುವ ಚಾಲಕರನ್ನ ಹೊರಗುತ್ತಿಗೆ ಮೂಲಕ ನೇಮಕ ಮಾಡಿಕೊಳ್ಳಲಾಗಿತ್ತು. ಪ್ರತಿ ತಿಂಗಳಿಗೆ 30 ಸಾವಿರ ರೂಪಾಯಿ ವೇತನ ನೀಡಲಾಗುವುದು. ಹೊಸ ಚಾಲಕರ ನೇಮಕಾತಿಗೆ ಹೆಚ್ಚು ಸಮಯ ಬೇಕಾಗುತ್ತದೆ. ಹೀಗಾಗಿ, ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.