ಕರ್ನಾಟಕ

karnataka

ETV Bharat / state

ವೆಂಕಟರಾವ್ ಘೋರ್ಪಡೆ ಸೋಲಿಗೆ ಕೈ ಮುಖಂಡರೇ ಕಾರಣ: ಕಾರ್ಯಕರ್ತರ ಆಕ್ರೋಶ - ಸಂಸದ ವಿ.ಎಸ್ ಉಗ್ರಪ್ಪ

ಹೊಸಪೇಟೆಯ ಕಾಂಗ್ರೆಸ್ ಕಚೇರಿಯಲ್ಲಿ ಹಾಕಲಾಗಿದ್ದ, ಉಗ್ರಪ್ಪ ಮತ್ತು ಶಿವಯೋಗಿವಯರ ಭಾವಚಿತ್ರ ಇರುವ ಪ್ಲೆಕ್ಸ್​ ಹರಿದು ಕಾರ್ಯಕರ್ತರು ಅಕ್ರೋಶ ವ್ಯಕ್ತ ಪಡಿಸಿದರು.

ಹೊಸಪೇಟೆಯಲ್ಲಿ ಕಾಂಗ್ರೆಸ್​ ಕಾರ್ಯಕರ್ತರ ಆಕ್ರೋಶ , Reason of Congress leaders for Defeat the Venkat Rao Ghorpade
ಹೊಸಪೇಟೆಯಲ್ಲಿ ಕಾಂಗ್ರೆಸ್​ ಕಾರ್ಯಕರ್ತರ ಆಕ್ರೋಶ

By

Published : Dec 13, 2019, 3:52 AM IST

ಹೊಸಪೇಟೆ: ವೆಂಕಟರಾವ್ ಘೋರ್ಪಡೆ ಅವರ ಸೋಲಿಗೆ ಕಾರಣ ಯಾರು? ಅವರ ಪರವಾಗಿ ಮಾಜಿ ಸಂಸದ ವಿ.ಎಸ್ ಉಗ್ರಪ್ಪನವರು ಯಾಕೆ ಪ್ರಚಾರ ಮಾಡಲಿಲ್ಲ ಎಂದು ಕಾಂಗ್ರೆಸ್​ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೊಸಪೇಟೆಯ ಕಾಂಗ್ರೆಸ್ ಕಚೇರಿಯಲ್ಲಿ ಹಾಕಲಾಗಿದ್ದ, ಉಗ್ರಪ್ಪ ಮತ್ತು ಶಿವಯೋಗಿವಯರ ಭಾವಚಿತ್ರ ಇರುವ ಪ್ಲೆಕ್ಸ್​ ಹರಿದು ಕಾರ್ಯಕರ್ತರು ಅಕ್ರೋಶ ವ್ಯಕ್ತ ಪಡಿಸಿದರು. ನಾಯಕರ ತಪ್ಪು ನಿರ್ಧಾರದಿಂದ ಕ್ಷೇತ್ರದಲ್ಲಿ ವೆಂಕಟರಾವ್ ಘೋರ್ಪಡೆ ಅವರು ಸೋಲುವಂತಾಯಿತು ಎಂದು ಅಸಮಾಧಾನವನ್ನು ಹೊರಹಾಕಿದರು.

ಹೊಸಪೇಟೆಯಲ್ಲಿ ಕಾಂಗ್ರೆಸ್​ ಕಾರ್ಯಕರ್ತರ ಆಕ್ರೋಶ

ವೆಂಕಟರಾವ್ ಘೋರ್ಪಡೆ ಅವರಿಗೆ ವಿಜಯನಗರ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಇಷ್ಟವೇ ಇರಲಿಲ್ಲ. ಅವರಿಗೆ ಕಾಂಗ್ರೆಸ್ ಪಕ್ಷದ ಮುಖಂಡರು ಬಲವಂತವಾಗಿ ಟಿಕೆಟ್ ನೀಡಿದ್ದಾರೆ. ಅವರು ಸ್ಪರ್ಧೆ ಮಾಡುವಾಗ ತಮ್ಮ ಬಳಿ ಹಣ ಇಲ್ಲ ಎಂದು ತಿಳಿಸಿದ್ದರು. ಆ ಸಮಯದಲ್ಲಿ ಎಲ್ಲಾ ನಾಯಕರು ಮತ್ತು ಮುಖಂಡರು ಸೇರಿ ದುಡ್ಡು ಹಾಕುತ್ತೇವೆ ಎಂದು ಆಶ್ವಾಸನೆ ನೀಡಿದ್ದರು ಆದರೆ, ಅದ್ಯಾವುದನ್ನು ಮುಖಂಡರು ಮಾಡದೆ ಅಭ್ಯರ್ಥಿ ಸೋಲಿಗೆ ಕಾರಣರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ABOUT THE AUTHOR

...view details