ಬಳ್ಳಾರಿ: ಅಧಿಕಾರಿಗಳು ದಾಳಿ ಮಾಡಿ ಹತ್ತು ಲಕ್ಷ ರೂ. ಮೌಲ್ಯದ ಅಕ್ರಮ ಪಡಿತರ ಅಕ್ಕಿ ವಶಕ್ಕೆ ಪಡೆದುಕೊಂಡ ಘಟನೆ ಜಿಲ್ಲೆಯ ಸಂಡೂರು ಪಟ್ಟಣದ ದೌಲತ್‌ಪುರ ರಸ್ತೆಯಲ್ಲಿ ನಡೆದಿದೆ.
10 ಲಕ್ಷ ರೂ. ಮೌಲ್ಯದ ಅಕ್ರಮ ಪಡಿತರ ಅಕ್ಕಿ ವಶಕ್ಕೆ ಪಡೆದ ಅಧಿಕಾರಿಗಳು.. - bellary
ಅಧಿಕಾರಿಗಳು ದಾಳಿ ಮಾಡಿ ಹತ್ತು ಲಕ್ಷ ರೂ. ಮೌಲ್ಯದ ಅಕ್ರಮ ಪಡಿತರ ಅಕ್ಕಿ ವಶಕ್ಕೆ ಪಡೆದುಕೊಂಡ ಘಟನೆ ಜಿಲ್ಲೆಯ ಸಂಡೂರು ಪಟ್ಟಣದ ದೌಲತ್‌ಪುರ ರಸ್ತೆಯಲ್ಲಿ ನಡೆದಿದೆ.
ಅಕ್ರಮ ಪಡಿತರ ಅಕ್ಕಿ
ಸಂಡೂರು ಪ್ರಭಾರ ತಹಶೀಲ್ದಾರ್ ಕೆ ಎಂ ಶಿವಕುಮಾರ್ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ಮಾಡಿ 50 ಕೆಜಿಯ 200ಕ್ಕೂ ಹೆಚ್ಚು ಬ್ಯಾಗ್ ವಶಕ್ಕೆ ಪಡೆದುಕೊಂಡಿದ್ದಾರೆ. ಅಂದಾಜು 10 ಲಕ್ಷ ಮೌಲ್ಯದ ಪಡಿತರ ಅಕ್ಕಿ ಎಂದು ಅಂದಾಜಿಸಲಾಗಿದ್ದು, ಲಾರಿ ಲೋಡ್ ಮಾಡುವಾಗ ದಾಳಿ ಮಾಡಿದ್ದಾರೆ. ಈಗೋಡಾನ್ ತುಮಟಿ ಕುಮಾರಸ್ವಾಮಿ ಎಂಬುವರಿಗೆ ಸೇರಿದ್ದೆಂದು ತಿಳಿದು ಬಂದಿದೆ. ದಾಳಿಯ ಬಗ್ಗೆ ತಿಳಿಯುತ್ತಿದ್ದಂತೆಯೇ ಕುಮಾರಸ್ವಾಮಿ, ಲಾರಿ ಚಾಲಕ ಹಾಗೂ ಕ್ಲೀನರ್ ಪರಾರಿಯಾಗಿದ್ದಾರೆ.