ವಿಜಯನಗರ :ಚಳಿಗಾಲದ ವಲಸೆಗಾರ ಸೈಬೀರಿಯನ್ ರೂಬಿಥ್ರೋಟ್ (ಕ್ಯಾಲಿಯೋಪ್) ಎಂಬ ಅಪರೂಪದ ಪಕ್ಷಿ ಹಂಪಿ ಪ್ರದೇಶದಲ್ಲಿ ಕಾಣಸಿಕ್ಕಿದೆ. ಸೈಬೀರಿಯಾದ ಕೋನಿಫೆರಸ್ ಕಾಡುಗಳಲ್ಲಿ ಸಂತಾನೋತ್ಪತ್ತಿ ಮಾಡುವ ಈ ಪಕ್ಷಿಯು ಭಾರತ, ಥಾಯ್ಲೆಂಡ್, ಇಂಡೋನೇಷ್ಯಾ ಮತ್ತು ಬಾಂಗ್ಲಾ ದೇಶದಲ್ಲಿ ಇದನ್ನು ಚಳಿಗಾಲದ ವಲಸೆ ಪಕ್ಷಿ ಎಂದು ಕರೆಯುತ್ತಾರೆ. ವಿಜಯನಗರದಲ್ಲಿ ಛಾಯಾಗ್ರಾಹಕ ನಾಗರಾಜ್.ಡಿ ಅವರು ದರೋಜಿ ಕರಡಿಧಾಮದ ಪರಿಸರದಲ್ಲಿ ಈ ಬಾನಡಿಯ ಫೋಟೋ ಕ್ಲಿಕ್ಕಿಸಿದ್ದಾರೆ. ಈ ಪಕ್ಷಿಯೊಂದಿಗೆ 'ನವರಂಗ' (ಇಂಡಿಯನ್ ಪಿಟ್ಟ) ಪ್ಯಾನ್ ಟೈಲ್ ಫೈ ಕ್ಯಾಚರ್, ಟಿಕಲ್ಸ್ ಬ್ಲೂ ಫೈ ಕ್ಯಾಚರ್, ಬ್ಲಾಕ್ ರೆಡ್ ಸ್ಪಾಟ್ ಎಂಬ ಅಪರೂಪದ ಪಕ್ಷಿಗಳೂ ಇದ್ದವು ಎಂದು ಅವರು ತಿಳಿಸಿದ್ದಾರೆ.
ದರೋಜಿ ಕರಡಿಧಾಮ ಪರಿಸರದಲ್ಲಿ ಅಪರೂಪದ 'ಸೈಬೀರಿಯನ್ ರೂಬಿಥ್ರೋಟ್' ಪಕ್ಷಿ ಪ್ರತ್ಯಕ್ಷ
ಸೈಬೀರಿಯನ್ ರೂಬಿಥ್ರೋಟ್ ಪಕ್ಷಿಯನ್ನು ಎಂದಾದರೂ ನೋಡಿದ್ದೀರಾ?. ವಿಜಯನಗರಕ್ಕೆ ವಲಸೆ ಬಂದಿದ್ದು, ದರ್ಶನ ನೀಡಿದೆ.
ಇದುವರೆಗೆ ಈ ಪಕ್ಷಿಯನ್ನು ನೋಡಿಲ್ಲ ಎಂದು ಪರಿಸರ ಮಾರ್ಗದರ್ಶಿ, ವನ್ಯಜೀವಿ ಛಾಯಗ್ರಾಹಕ ಪಂಪಯ್ಯಸ್ವಾಮಿ ಮಠ ಹೇಳಿದರು. "ಇದು ವಲಸೆ ಪಕ್ಷಿ. ಹಂಪಿ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ನೋಡಲು ಸಿಕ್ಕಿದೆ. ಬೆಂಗಳೂರು, ಪಶ್ಚಿಮಘಟ್ಟ ಹಾಗೂ ತಮಿಳುನಾಡಿನ ನೀಲಗಿರಿ ಪ್ರದೇಶದಲ್ಲಿ ಈ ಹಿಂದೆ ಕಾಣಿಸಿಕೊಂಡಿತ್ತು. ಹವಾಮಾನ ಬದಲಾವಣೆಯಿ೦ದಾಗಿ ಉತ್ತರ ಧ್ರುವದಲ್ಲಿ ಉಷ್ಣಾಂಶ ಹೆಚ್ಚಾಗುತ್ತಿದ್ದು ವಲಸೆ ಹಕ್ಕಿಗಳು ದಕ್ಷಿಣ ಭೂಭಾಗಕ್ಕೆ ಬರುತ್ತಿವೆ" ಎಂದು ಪಕ್ಷಿ ಸಂಶೋಧಕ ಸಮದ್ ಕೊಟ್ಟೂರು ಹೇಳಿದರು.
ಇದನ್ನೂ ಓದಿ:11 ವರ್ಷಗಳ ಬಳಿಕ ಹಕ್ಕಿ ಗಣತಿ: ಬಿಳಿಗಿರಿ ಬನದಲ್ಲಿ 274 ಪಕ್ಷಿ ಗುರುತು