ಕರ್ನಾಟಕ

karnataka

ETV Bharat / state

'ಐಟಿ ದಾಳಿಯಿಂದ ವಿರೋಧಿಗಳನ್ನು ರಾಜಕೀಯವಾಗಿ ಬೆದರಿಸುವುದು ಬಿಜೆಪಿಯ ತಂತ್ರ' - ಮಾಜಿ ಸಚಿವ ರಾಮಲಿಂಗಾರೆಡ್ಡಿ

ಐಟಿ ಇಲಾಖೆ ಬಳಸಿಕೊಂಡು ವಿರೋಧ ಪಕ್ಷಗಳನ್ನು ಬೆದರಿಸುವ ಕಾರ್ಯ ಮಾಡುತ್ತಿದ್ದರು. ಆದ್ರೀಗ ಅವರದ್ದೇ ಪಕ್ಷದ ನಾಯಕರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ.

Ramalingareddy
ರಾಮಲಿಂಗಾರೆಡ್ಡಿ

By

Published : Oct 8, 2021, 1:15 PM IST

Updated : Oct 8, 2021, 4:32 PM IST

ವಿಜಯಪುರ: ಐಟಿ ದಾಳಿಯಿಂದ ವಿರೋಧಿಗಳನ್ನು ರಾಜಕೀಯವಾಗಿ ಬೆದರಿಸುವುದು ಬಿಜೆಪಿಯ ತಂತ್ರ. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಸಿ, ಸುಮ್ಮನೆ ಕುಳಿತುಕೊಳ್ಳುವಂತೆ ಮಾಡಿರುವ ಬಿಜೆಪಿ ಹೈಕಮಾಂಡ್, ನಿನ್ನೆ ಅವರ ಆಪ್ತರ ಮೇಲೂ ಐಟಿ ದಾಳಿ ನಡೆಸಿದೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಸಿಂಧಗಿಯಲ್ಲಿ ಮಾತನಾಡಿದ ಅವರು, ಚುನಾವಣೆ ಬಂದಾಗೊಮ್ಮೆ ಬಿಜೆಪಿ ಐಟಿ ದಾಳಿ ತಂತ್ರ ರೂಪಿಸುತ್ತದೆ. ಅದರಲ್ಲೂ ವಿರೋಧ ಪಕ್ಷಗಳನ್ನು ಹೆದರಿಸಲು ಈ ರೀತಿ ಮಾಡುವುದು ಮಾಮೂಲಿಯಾಗಿದೆ. ಈಗ ಬಿಜೆಪಿ ತನ್ನದೇ ಮುಖಂಡರನ್ನು ಟಾರ್ಗೆಟ್ ಮಾಡಿದೆ. ಬಿಎಸ್​​ವೈ ಅವರನ್ನು ರಾಜಕೀಯವಾಗಿ ಹಣಿಯಲು ಐಟಿ ದಾಳಿ ಮಾಡಿಸಿರಬಹುದು ಎಂದರು.

ಐಟಿ ದಾಳಿ ವಿರೋಧಿಗಳ ಬೆದರಿಸುವ ಬಿಜೆಪಿಯ ತಂತ್ರಗಾರಿಕೆ: ರಾಮಲಿಂಗಾರೆಡ್ಡಿ ಆರೋಪ

ದೇಶದ ನಾನಾ ರಾಜ್ಯಗಳಲ್ಲಿ ಬಿಜೆಪಿ ಇದೇ ತಂತ್ರಗಾರಿಕೆ ರೂಪಿಸಿ, ವಿರೋಧ ಪಕ್ಷಗಳನ್ನು ಬೆದರಿಸುವ ತಂತ್ರಗಾರಿಕೆ ಮಾಡುತ್ತಿದೆ. ಒಂದು ದಿನ ಅದೇ ತಂತ್ರಗಾರಿಕೆ ಅವರಿಗೆ ಉರುಳಾಗಲಿದೆ ಎಂದು ಟೀಕಿಸಿದರು.

ಇದನ್ನೂ ಓದಿ:IT ಅಧಿಕಾರಿಗಳು ವಿಚಾರಣೆಗೆ ಕರೆದಾಗ ಉಮೇಶ್ ಹಾಜರಾಗುತ್ತಾರೆ: ಬಿ.ಎಸ್‌.ಯಡಿಯೂರಪ್ಪ

Last Updated : Oct 8, 2021, 4:32 PM IST

ABOUT THE AUTHOR

...view details