ಬಳ್ಳಾರಿ :ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಸಮಾರಂಭದ ನಿಮಿತ್ತ ಗಣಿನಗರಿ ಬಳ್ಳಾರಿಯ ಯುವ ಕುಂಚ ಕಲಾವಿದನಿಂದ ಪ್ರಧಾನಿ ಮೋದಿಯವರ ಕನಸಿನ ಭಾರತ ನಿರ್ಮಾಣದ (ರಾಮಮಂದಿರ) ಚಿತ್ರ ಅತ್ಯದ್ಭುತವಾಗಿ ಮೂಡಿಬಂದಿದೆ.
ಬಳ್ಳಾರಿಯ ಮೋತಿ ವೃತ್ತದಲ್ಲಿರುವ ಶ್ರೀರಾಮ ಮಂದಿರದಲ್ಲಿ, ಬೆಂಗಳೂರಿನ ಕಲಾ ಮಂದಿರ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿ ಎನ್ ಎಸ್ ವೀರೇಶ್ ಅವರ ಕುಂಚದಿಂದ ಅರಳಿದ ಈ ರಾಮಮಂದಿರ ನಿರ್ಮಾಣ ಕನಸಿನ ಭಾರತವನ್ನ ತನ್ನ ಕಲ್ಪನೆಯೊಂದಿಗೆ ಚಿತ್ರಿಸಿದ್ದಾನೆ. ಈ ಕಲಾವಿದನ ಕುಂಚದಲ್ಲಿ ಬಲಗಡೆ ಪ್ರಧಾನಿ ಮೋದಿಯವರು ಹಾಗೂ ಎಡಗಡೆಯ ಭಾಗದಲ್ಲಿ ಭಾರತ ದೇಶದ ನಕಾಶೆ ಚಿತ್ರಿಸಿದ್ದಾನೆ.