ಹೊಸಪೇಟೆ : ಸಿದ್ದರಾಮಯ್ಯನವರು ಏಕಾಂಗಿಯಾಗಿ ಪಕ್ಷವನ್ನು ಬಲಪಡಿಸುತ್ತಿರುವುದನ್ನು ನೋಡಿದ್ರೆ ನನಗೆ ಪಾಪ ಅನಿಸುತ್ತಿದೆ ಎಂದು ಬಿಜೆಪಿ ಎಸ್.ಟಿ ಮೋರ್ಚಾ ಅಧ್ಯಕ್ಷ ರಾಜುಗೌಡ ಅಸಹಾಯಕತೆ ತೋಡಿಕೊಂಡರು.
ಸಿದ್ದರಾಮಯ್ಯ ಅವರ ಏಕಾಂಗಿ ಹೋರಾಟವನ್ನು ನೋಡಿದರೆ ಅಯ್ಯೋ ಎನಿಸುತ್ತದೆ : ರಾಜು ಗೌಡ - latest hosapete ballary news
ಸಿದ್ದರಾಮಯ್ಯನವರು ಏಕಾಂಗಿಯಾಗಿ ಪಕ್ಷವನ್ನು ಬಲಪಡಿಸುತ್ತಿರುವುದನ್ನು ನೋಡಿದ್ರೆ ನನಗೆ ಪಾಪ ಅನಿಸುತ್ತಿದೆ ಎಂದು ಬಿಜೆಪಿ ಎಸ್.ಟಿ ಮೋರ್ಚಾ ಅಧ್ಯಕ್ಷ ರಾಜುಗೌಡ ಹೇಳಿದ್ದಾರೆ.
ಪಟೇಲ್ ನಗರದ ಬಿಜೆಪಿ ಕಚೇರಿಯಲ್ಲಿಂದು ನಡೆದ ಭೋವಿ ಸಮಾಜದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜುಗೌಡ, ನಾನು ಚಿಕ್ಕವನಿದ್ದಾಗಿನಿಂದ ಸಿದ್ದರಾಮಯ್ಯ ಅವರ ಅಭಿಮಾನಿಯಾಗಿದ್ದೇನೆ. ಆದರೀಗ ಅವರ ಏಕಾಂಗಿತನದ ಹೋರಾಟ ನೋಡಿದ್ರೆ ಅಯ್ಯೋ ಪಾಪ ಅನಿಸುತ್ತೆ ಎಂದರು. ಇನ್ನೂ ದಲಿತರ ಮತ್ತು ಅಲ್ಪಸಂಖ್ಯಾತರ ಹೆಸರಲ್ಲಿ ಕಾಂಗ್ರೆಸ್ ರಾಜಕೀಯವನ್ನು ಮಾಡಿಕೊಂಡು ಬಂದಿದ್ದು ಅದರ ಇತಿಹಾಸ ನೋಡಿದರೆ ಗೊತ್ತಾಗುತ್ತದೆ ಹಾಗಾಗಿ ಬಿಜೆಪಿ ಪಕ್ಷಕ್ಕೆ ಎಲ್ಲಾ ಮತದಾರರು ಮತ ನೀಡಬೇಕೆಂದು ಕೇಳಿಕೊಂಡರು.
ಕಾಂಗ್ರೆಸ್ ಪಕ್ಷ ಮತ್ತು ಜೆಡಿಎಸ್ ಪಕ್ಷಗಳು ಅಡ್ರಸ್ ಇಲ್ಲದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಸಿಕ್ಕ ದಿನದಿಂದ ಅಧಿಕಾರವನ್ನು ಮಾಡುತ್ತಾ ಬಂದಿದೆ. ದುರಂತ ಎಂದರೆ ಈವರೆಗೂ ಯಾವ ದಲಿತರು ಮತ್ತು ಹಿಂದುಳಿದ ವರ್ಗದ ಜನರು ಅಭಿವೃದ್ಧಿಯನ್ನು ಕಂಡಿಲ್ಲ ಎಂದು ಚಿಕ್ಕ ಕಥೆಯ ಮೂಲಕ ಸಮರ್ಥನೆ ಮಾಡಿಕೊಂಡರು. ಹಾಗಾಗಿ ಪ್ರತಿಯೊಬ್ಬರು ಭಾರತೀಯ ಜನತಾ ಪಕ್ಷಕ್ಕೆ ಮತದಾನವನ್ನು ಮಾಡಬೇಕಿದೆಯೆಂದು ಮನವಿ ಮಾಡಿದರು.