ಹೊಸಪೇಟೆ: ಸಚಿವ ಆನಂದ್ ಸಿಂಗ್ ಅವರ ಕಚೇರಿಗೆ ಸಂಡೂರು ತಾಲೂಕಿನ ಜೋಗದ ಶ್ರೀ ಅನ್ನಪೂರ್ಣೇಶ್ವರಿ ಮಠದ ದಿಗಂಬರ ರಾಜಭಾರತಿ ಸ್ವಾಮೀಜಿ ಬುಧವಾರ ಭೇಟಿ ನೀಡಿದರು.
ಸಚಿವ ಆನಂದ್ ಸಿಂಗ್ ಕಚೇರಿಗೆ ರಾಜಭಾರತಿ ಸ್ವಾಮೀಜಿ ಭೇಟಿ - ದತ್ತಾತ್ರೇಯ ಜಯಂತಿ ಕಾರ್ಯಕ್ರಮ
ಜೋಗದಲ್ಲಿ ಫೆ. 25ರಂದು ನಡೆಯುವ ಸಾಮೂಹಿಕ ವಿವಾಹ ಹಾಗೂ ದತ್ತಾತ್ರೇಯ ಜಯಂತಿ ಕಾರ್ಯಕ್ರಮಕ್ಕೆ ಸಚಿವರಿಗೆ ಸ್ವಾಮೀಜಿ ಆಹ್ವಾನ ನೀಡಿದರು. ನೂತನ ವಿಜಯನಗರ ಜಿಲ್ಲೆಯ ರಚನೆ ಬಳಿಕ ಸ್ವಾಮೀಜಿ ಭೇಟಿ ನೀಡಿರುವುದು ಚರ್ಚೆಗೀಡು ಮಾಡಿದೆ.

ಆನಂದ್ ಸಿಂಗ್ ಕಚೇರಿಗೆ ರಾಜಭಾರತಿ ಸ್ವಾಮೀಜಿ ಭೇಟಿ
ಇದೇ ಸಂದರ್ಭದಲ್ಲಿ ಹಜ್, ವಕ್ಫ್ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರೊಂದಿಗೆ ನೂತನ ವಿಜಯನಗರ ಜಿಲ್ಲೆಯ ಕುರಿತು ಸಮಾಲೋಚನೆ ನಡೆಸಿದರು.
ಜೋಗದಲ್ಲಿ ಫೆ. 25 ರಂದು ನಡೆಯುವ ಸಾಮೂಹಿಕ ವಿವಾಹ ಹಾಗೂ ದತ್ತಾತ್ರೇಯ ಜಯಂತಿ ಕಾರ್ಯಕ್ರಮಕ್ಕೆ ಸಚಿವರಿಗೆ ಸ್ವಾಮೀಜಿ ಆಹ್ವಾನವನ್ನು ನೀಡಿದರು. ನೂತನ ವಿಜಯನಗರ ಜಿಲ್ಲೆಯ ರಚನೆ ಬಳಿಕ ಸ್ವಾಮೀಜಿ ಭೇಟಿ ನೀಡಿರುವುದು ಚರ್ಚೆಗೀಡು ಮಾಡಿದೆ.
ಈ ಹಿಂದೆ ಕಾಂಗ್ರೆಸ್ ಸರ್ಕಾರವಿದ್ದು, ಡಿ.ಕೆ.ಶಿವಕುಮಾರ್ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಹೊತ್ತಾಗ ಜೋಗದ ಸ್ವಾಮೀಜಿಯವರ ಆಶೀರ್ವಾದ ಪಡೆದುಕೊಂಡಿದ್ದರು.