ಹೊಸಪೇಟೆ (ಬಳ್ಳಾರಿ):ತುಂಗಭದ್ರಾ ಜಲಾಶಯದ ವೈಕುಂಠ ಅತಿಥಿ ಗೃಹದಲ್ಲಿಂದು ಕಂದಾಯ ಸಚಿವ ಆರ್.ಅಶೋಕ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಬಳಿಕ ಮಾತನಾಡಿದ ಅವರು, ಬೆಳೆಹಾನಿ ಸಂಬಂಧ ನಾಳೆ ದೆಹಲಿಯಲ್ಲಿ ಸಿಎಂ ಬಿಎಸ್ವೈ ಚರ್ಚಿಸಲಿದ್ದಾರೆ ಎಂದು ತಿಳಿಸಿದರು.
ಬೆಳೆ ಹರಿಹಾರ ಸಂಬಂಧ ನಾಳೆ ದೆಹಲಿಯಲ್ಲಿ ಸಿಎಂ ಚರ್ಚಿಸಲಿದ್ದಾರೆ: ಆರ್.ಅಶೋಕ್ - CM BS Y Delhi Tour
ಪ್ರಸ್ತುತ ಬೆಳೆ ಹಾನಿ ಸಮೀಕ್ಷೆ ನಡೆಸಲು ಸೂಚಿಸಲಾಗಿದೆ. ಇದು 2ನೇ ಹಂತದ ಸಮೀಕ್ಷೆಯಾಗಿದೆ. ಮೊದಲನೇ ಹಂತದ ಬೆಳೆ ಪರಿಹಾರವನ್ನು ಕೇಂದ್ರ ಸರ್ಕಾರ ಒದಗಿಸಿದೆ. ಅಲ್ಲದೆ ಈ ಸಂಬಂಧ ನಾಳೆ ಸಿಎಂ ಬಿಎಸ್ವೈ ಚರ್ಚಿಸಲಿದ್ದಾರೆ ಎಂದಿದ್ದಾರೆ.
ಅಲ್ಲದೆ ಪ್ರಸ್ತುತ ಬೆಳೆ ಹಾನಿ ಸಮೀಕ್ಷೆ ನಡೆಸಲು ಸೂಚಿಸಲಾಗಿದೆ. ಇದು 2ನೇ ಹಂತದ ಸಮೀಕ್ಷೆಯಾಗಿದೆ. ಮೊದಲನೇ ಹಂತದ ಬೆಳೆ ಪರಿಹಾರವನ್ನು ಕೇಂದ್ರ ಸರ್ಕಾರ ಒದಗಿಸಿದೆು. ಹೊಸಪೇಟೆಯಲ್ಲಿ ಕಳೆದ 5 ತಿಂಗಳಿಂದ ಅಂಚೆ ಇಲಾಖೆಯಿಂದ ಪಿಂಚಣಿ ಸೌಲಭ್ಯ ಸಿಕ್ಕಿಲ್ಲ ಎಂಬ ದೂರುಗಳು ಬಂದಿವೆ. ಸಾರ್ವಜನಿಕರು ತಾಲೂಕು ಕಚೇರಿಗೆ ಅಲೆಯುವಂತಾಗಿದೆ. ಇದನ್ನು ತಪ್ಪಿಸಲು ಬ್ಯಾಂಕ್ ಮೂಲಕ ಹಣ ಪಾವತಿಸಲಾಗುವುದು ಎಂದರು.
ಕೊರೊನಾ ಸಂದರ್ಭದಲ್ಲಾದ ಖರ್ಚಿನ ಕುರಿತು ಮಾಹಿತಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೆ ಸಂಡೂರು ಶಾಸಕ ಈ.ತುಕಾರಾಂ ಅವರು ಇನಾಂ ಭೂಮಿ ಕುರಿತು ಸಭೆಯಲ್ಲಿ ಮಾಹಿತಿ ನೀಡಿದ್ದಾರೆ. ಈ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.