ಹೊಸಪೇಟೆ (ವಿಜಯನಗರ):ಜೂಜಾಟ ಆಡುವ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿಯಾದ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅಡವಿಹಳ್ಳಿ ಗ್ರಾಮದಲ್ಲಿ ಸಂಜೆ ನಡೆದಿದೆ.
ಜೂಜಾಟ ಸಂದರ್ಭದಲ್ಲಿ ಜಗಳ: ದೊಣ್ಣೆ, ಕಲ್ಲುಗಳಿಂದ ಪರಸ್ಪರ ಹಲ್ಲೆ - hospet latest news
ನಾಗ ಪಂಚಮಿ ಹಬ್ಬದ ಅಂಗವಾಗಿ ಜೂಜಾಟ ಆಡುವ ಸಂದರ್ಭದಲ್ಲಿ ಏಕವಚನದಲ್ಲಿ ಮಾತನಾಡಿದ್ದಾರೆ. ಆಗ ಎರಡು ಗುಂಪಿನವರು ಒಬ್ಬರಿಗೊಬ್ಬರು ಬೈದಾಡಿಕೊಂಡಿದ್ದಾರೆ. ಪರಿಸ್ಥಿತಿ ತಾರಕಕ್ಕೇರಿ ಬಳಿಕ ದೊಣ್ಣೆ, ಕಲ್ಲುಗಳಿಂದ ಪರಸ್ಪರ ಹಲ್ಲೆ ಮಾಡಿಕೊಂಡಿರುವ ಘಟನೆ ಹರಪನಹಳ್ಳಿ ತಾಲೂಕಿನ ಅಡವಿಹಳ್ಳಿ ಗ್ರಾಮದಲ್ಲಿ ನಡೆದಿದೆ.
![ಜೂಜಾಟ ಸಂದರ್ಭದಲ್ಲಿ ಜಗಳ: ದೊಣ್ಣೆ, ಕಲ್ಲುಗಳಿಂದ ಪರಸ್ಪರ ಹಲ್ಲೆ ಜೂಜಾಟ ಸಂದರ್ಭದಲ್ಲಿ ಜಗಳ: ದೊಣ್ಣೆ, ಕಲ್ಲುಗಳಿಂದ ಪರಸ್ಪರ ಹಲ್ಲೆ](https://etvbharatimages.akamaized.net/etvbharat/prod-images/768-512-12763150-thumbnail-3x2-nin.jpg)
ಜೂಜಾಟ ಸಂದರ್ಭದಲ್ಲಿ ಜಗಳ: ದೊಣ್ಣೆ, ಕಲ್ಲುಗಳಿಂದ ಪರಸ್ಪರ ಹಲ್ಲೆ
ನಾಗ ಪಂಚಮಿ ಹಬ್ಬದ ನಿಮಿತ್ತ ಜೂಜಾಟ ಆಡುವ ವೇಳೆ ಏಕವಚನದಲ್ಲಿ ಮಾತನಾಡಿದ್ದಾರೆ. ಆಗ ಎರಡು ಗುಂಪಿನವರು ಒಬ್ಬರಿಗೊಬ್ಬರು ಬೈದಾಡಿಕೊಂಡಿದ್ದಾರೆ. ಪರಿಸ್ಥಿತಿ ತಾರಕಕ್ಕೇರಿ ಬಳಿಕ ದೊಣ್ಣೆ, ಕಲ್ಲುಗಳಿಂದ ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ.
ಜೂಜಾಟ ಸಂದರ್ಭದಲ್ಲಿ ಜಗಳ: ದೊಣ್ಣೆ, ಕಲ್ಲುಗಳಿಂದ ಪರಸ್ಪರ ಹಲ್ಲೆ
ಘಟನೆ ಸಂಬಂಧ ಎರಡು ಗುಂಪಿನ ಮುಖಂಡರು ಸ್ಥಳೀಯ ಸ್ವಾಮೀಜಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ಎರಡು ಗುಂಪಿನವರು ರಾಜೀ ಮಾಡಿಕೊಂಡು ಹೋಗುವಂತೆ ಈ ವೇಳೆ ಸ್ವಾಮೀಜಿ ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ. ಇನ್ನು ಹರಪನಹಳ್ಳಿ ಪೊಲೀಸರು ಭೇಟಿ ನೀಡಿ, ವಿಚಾರಣೆ ನಡೆಸಿದ್ದಾರೆ.