ಕರ್ನಾಟಕ

karnataka

ETV Bharat / state

ಪುನೀತ್​ ರಾಜ್‌ಕುಮಾರ್​ ಜಾಕೆಟ್‌ಗೆ​ ಫ್ರೇಮ್​ ಹಾಕಿಸಿ ಕಚೇರಿಯಲ್ಲಿಟ್ಟ ಸಚಿವ ಆನಂದ್ ಸಿಂಗ್ - ವಿಜಯನಗರ

ಹೊಸಪೇಟೆಗೆ ಪುನೀತ್‌ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಭಿಮಾನಿ ಕಿಚಡಿ ವಿಶ್ವನಿಗೆ ಅರಸು ಸಿನಿಮಾದಲ್ಲಿ ಧರಿಸಿದ್ದ ಜಾಕೆಟ್‌ ನೀಡಿದ್ದರಂತೆ. ಕಿಚಡಿ ವಿಶ್ವ ಈ ಜಾಕೆಟ್ ಅನ್ನು ಸಚಿವ ಆನಂದ್ ಸಿಂಗ್‌ ಪುತ್ರ ಸಿದ್ಧಾರ್ಥ್ ಸಿಂಗ್‌ ನೀಡಿದ್ದಾರೆ. ಇದೀಗ ಆನಂದ್​ ಸಿಂಗ್​ ಕಚೇರಿಯಲ್ಲಿ ಇದನ್ನು ಫ್ರೇಮ್​ ಹಾಕಿಸಿ ಇಟ್ಟುಕೊಂಡು ಅಭಿಮಾನ ಮೆರೆದಿದ್ದಾರೆ.

Puneeth Rajkumar jacket in minister office
ಪುನೀತ್​ ರಾಜ್​ ಕುಮಾರ್​ ಜಾಕೆಟ್

By

Published : Jun 24, 2022, 10:48 PM IST

ವಿಜಯನಗರ:ಅಭಿಮಾನಿಗಳ ಎದೆಯಲ್ಲಿ ಅಪ್ಪು ನೆನಪು ಅಮರ. ಅಪ್ಪು ಮಾಡಿದ ಸಾಮಾಜಿಕ ಕೆಲಸಗಳು ಎಲ್ಲರಿಗೂ ಮಾದರಿ ಆಗುವಂಥದ್ದು. ಸಚಿವರೊಬ್ಬರು ಅಪ್ಪು ಅವರ ಜಾಕೆಟ್​ನ್ನು ತಮ್ಮ ಕಚೇರಿಯಲ್ಲಿ ಫ್ರೇಮ್​ ಹಾಕಿಸಿ ಇಟ್ಟುಕೊಂಡಿದ್ದಾರೆ.

ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಹೊಸಪೇಟೆಗೆ ಪುನೀತ್‌ ರಾಜ್‌ಕುಮಾರ್‌ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಭಿಮಾನಿ ಕಿಚಡಿ ವಿಶ್ವನಿಗೆ ಅರಸು ಸಿನಿಮಾದಲ್ಲಿ ಧರಿಸಿದ್ದ ಜಾಕೆಟ್‌ನ್ನು ನೀಡಿದ್ದರು. ಕಿಚಡಿ ವಿಶ್ವ ಆ ಜಾಕೆಟ್ ಅನ್ನು ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದರು.

ಅಪ್ಪು ಕೊಟ್ಟಿದ್ದ ಜಾಕೆಟ್​ನ್ನು ಸಚಿವರ ಪುತ್ರ ಸಿದ್ಧಾರ್ಥ್ ಸಿಂಗ್‌ ಅವರಿಗೆ ಕಿಚಡಿ ವಿಶ್ವ ನೀಡಿದ್ದಾರೆ. ಸಿದ್ಧಾರ್ಥ್ ಸಿಂಗ್‌ ತಮ್ಮ ತಂದೆ ಆನಂದ್​ ಸಿಂಗ್​ ಕಚೇರಿಯಲ್ಲಿ ಈ ಜಾಕೆಟ್​ನ್ನು ಫ್ರೇಮ್​ ಹಾಕಿಸಿ ಇಟ್ಟಿದ್ದಾರೆ. ಆನಂದ್​ ಸಿಂಗ್​ ಅವರ ಈ ಅಭಿಮಾನ ಕಂಡು ಅಪ್ಪು ಫ್ಯಾನ್ಸ್​ ಫುಲ್​ ಖುಷ್​ ಆಗಿದ್ದಾರೆ.

ಇದನ್ನೂ ಓದಿ:ಸಿಎಂಗೆ ಸಾಹಿತಿಗಳಿಂದ ಬಹಿರಂಗ ಪತ್ರ : ಬಸವ ಜಯಂತಿಯಂತೆ ಈದ್ ಆಚರಿಸಿ ಶಾಂತಿ ಮರು ಸ್ಥಾಪನೆಗೆ ಒತ್ತಾಯ

ABOUT THE AUTHOR

...view details