ಬಳ್ಳಾರಿ:ಪಿಯು ಉಪನ್ಯಾಸಕ ಹುದ್ದೆಗಳ ಕೌನ್ಸೆಲಿಂಗ್ ಮಾಡಿ ಆದೇಶ ಪ್ರತಿ ನೀಡಿ ಎಂದು ಬಳ್ಳಾರಿ ಜಿಲ್ಲೆಯಲ್ಲಿ ಆಯ್ಕೆಯಾದ ಪಿಯು ಉಪನ್ಯಾಸಕರು ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಈಟಿವಿ ಭಾರತದೊಂದಿಗೆ ಪಿಯು ಉಪನ್ಯಾಸಕರಾಗಿ ಆಯ್ಕೆಯಾದ ಅಭ್ಯರ್ಥಿ ಮಲ್ಲಿಕಾರ್ಜುನ ಶೆಟ್ಟಿ, ಕರ್ನಾಟಕ ರಾಜ್ಯ ಪಿಯು ಉಪನ್ಯಾಸಕರ ನೇಮಕಾತಿ ಆರಂಭವಾಗಿ 5 ವರ್ಷಗಳು ಕಳೆದಿವೆ. ಎಲ್ಲಾ ಹಂತದ ನೇಮಕಾತಿ ಪ್ರಕ್ರಿಯೆ ಮುಕ್ತಾಯವಾಗಿದೆ. ಹೀಗಾಗಿ ನಮಗೆ ಆದೇಶ ಪ್ರತಿ ನೀಡಬೇಕು. ಜೊತೆಗೆ, ಕಾಲೇಜುಗಳ ಬಗ್ಗೆ ಕೌನ್ಸೆಲಿಂಗ್ ಆಗಬೇಕು ಎಂದರು.