ಬಳ್ಳಾರಿ: ಸಾರ್ವಜನಿಕರು ವೈದ್ಯರಿಂದ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿ ಪಡೆಯಬಹುದು ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸದಸ್ಯ ಮತ್ತು ಹಿರಿಯ ವೈದ್ಯ ಡಾ. ಕೆ.ನಾಗರಾಜ್ ಹೇಳಿದರು.
ವಿಕಿರಣ ಶಾಸ್ತ್ರ ತಜ್ಞ ಡಾ. ಕೆ.ನಾಗರಾಜ್ ರಾವ್ ಗೃಹರಕ್ಷಕ ದಳ ಕಚೇರಿ ಸಭಾಂಗಣದಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಆರೋಗ್ಯದಲ್ಲಿ ತೊಂದರೆ ಉಂಟಾದರೆ ವೈದ್ಯರಿಗೆ ದೂರವಾಣಿ ಮೂಲಕ ಕರೆ ಮಾಡಿ, ಸಮಸ್ಯೆ ಪರಿಹರಿಸಿಕೊಳ್ಳಬಹುದು ಎಂದರು.
ರೆಡ್ ಕ್ರಾಸ್ ಸಂಸ್ಥೆಯ ವಿನೂತನ ಪ್ರಯತ್ನ ಸಾಮಾನ್ಯ ಮತ್ತು ವಿಕಿರಣ ಶಾಸ್ತ್ರ ತಜ್ಞ ಡಾ. ಕೆ.ನಾಗರಾಜ್ ರಾವ್ ಅವರನ್ನು ಸಂಪರ್ಕಿಸಲು 94491521992
ಮಕ್ಕಳ ತಜ್ಞರಾದ ಡಾ. ಶಾಂತಲಾ ಅವರನ್ನು ಸಂಪರ್ಕಿಸಲು 98458268793,
ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರಾದ ಡಾ .ಆಶಾ ರಾಣಿ 9448789432
ಈ ವೈದ್ಯರನ್ನು ದೂರವಾಣಿ ಮೂಲಕ ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.
ಸಾರ್ವಜನಿಕರಿಗೆ ಹಣಕಾಸಿನ ತೊಂದರೆ ಇದ್ದಲ್ಲಿ ಅಂತವರ ಮನೆಗೆ ಔಷಧಿ ಒದಗಿಸಲಾಗುವುದು. ಗರ್ಭಿಣಿಯರಿಗೆ ಆಂಬುಲೆನ್ಸ್ ಮೂಲಕ ಸೇವೆ ದೊರಕಿಸಲಾಗುವುದು ಎಂದು ರೆಡ್ ಕ್ರಾಸ್ ಸಂಸ್ಥೆ ತಿಳಿಸಿದೆ.
ಸಂಸ್ಥೆಯಿಂದ ನೀಡಲಾಗುತ್ತಿರುವ ಸೇವೆಯನ್ನು ನಗರದ ಸಾರ್ವಜನಿಕರು ಪಡೆದುಕೊಳ್ಳಬಹುದು. ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಎಂ.ಎ.ಶಕೀಬ್ ಇನ್ನಿತರ ಸದಸ್ಯರು ಇದ್ದರು.